Upakarma on 28th and 29th Aug

‘Upanayana’ is one of the shodasha(16) samskaras. A brahmana’s brahmacharya ashram begins only with this ceremony. It’s only after this ceremony that the young ‘vatu’ begins his study of the vedas and other scriptures. Due to passage of time and also due to inherent incapabilities of the person, he would begin to commit a few mistakes while following dharmic activities assigned to him. The mantras do not yield as much fruit due to these slippages in ritualistic practices. To infuse a new energy and erase doshas is one of the main purposes of “Utsarjana Upakarma”, which this year is observed by Rigvedics on 28th and Yajurvedis on 29th August 2015. The rituals on this day are mandatory. While it is a sin not to observe Upakarma, it is also very fruitful for those that do.

Importance of Utsarjana :
"adhItAnAM CaMdasAM yAtayAmatA nirAsArthaM utsarjanaM”
To weed out weakness in Veda Mantra, a brahmana has to observe ‘Utsarjana’ ritual.

Why would the Vedas Mantras become weak?

  • We might not have recited them in the correct chandas(meter) or while not sitting in the right asana
  • We might not have followed desha-kala niyamas
  • We might have used them to please the ineligibles


To get rid of the faults accrued due to these and many other contributing factors, Utsarjana is a compulsory ceremony.

Importance of Upakarma :
“aDhyEpyamANAnAM CaMdasAM savIryatvAya”
‘Upakarma’ needs to be observed to strengthen our dharmic practices and vedic mantra recitals, which we would perform in the coming year. We should be ever grateful to our ancient rishis who were veda mantra drashtararu. This is the day we express our gratitude to them.

=======================================****=====================================

ಉಪನಯನವು ಷೋಡಶ ಸಂಸ್ಕಾರಗಳಲ್ಲೊಂದಾಗಿದೆ. ಉಪನಯನ ಸಂಸ್ಕಾರದಿಂದಲೇ ಬ್ರಾಹ್ಮಣನ ಬ್ರಹ್ಮಚರ್ಯಾಶ್ರಮವು ಪ್ರಾರಂಭವಾಗುತ್ತದೆ. ಈ ಸಂಸ್ಕಾರವನ್ನು ಹೊಂದಿದ ವಟುವು ಸುಸಂಸ್ಕೃತನಾಗಿ ಸ್ವಾಧ್ಯಾಯ ಮೊದಲಾದ ಧಾರ್ಮಿಕ ಕ್ರಿಯೆಗಳಲ್ಲಿ ತೊಡಗುತ್ತಾನೆ. ಆದರೆ ಕಾಲಬಲದಿಂದ ಮತ್ತು ತನ್ನ ಯೋಗ್ಯತೆಯಿಂದ ಪ್ರತಿಯೊಬ್ಬ ವ್ಯಕ್ತಿಯ ಧರ್ಮಾಚರಣೆಗಳಲ್ಲಿ ಲೋಪ-ದೋಷಗಳುಂಟಾಗುತ್ತವೆ. ಇದರಿಂದ  ವ್ಯಕ್ತಿಯ ಸಾಮರ್ಥ್ಯ ಕುಗ್ಗುತ್ತದೆ. ಅವನು ಉಚ್ಛರಿಸುವ ಮಂತ್ರಗಳೆಲ್ಲ ದುರ್ಬಲವಾಗಿ ಫಲ ನೀಡುವುದಿಲ್ಲ.ಈ ದೋಷಗಳನ್ನೆಲ್ಲ ಪರಿಹರಿಸಿ ಮನುಷ್ಯನಲ್ಲಿ ಹೊಸ ಸಾಮರ್ಥ್ಯವನ್ನು ತುಂಬುವ ಧಾರ್ಮಿಕ ವಿಧಿಯೇ " ಉತ್ಸರ್ಜನ-ಉಪಾಕರ್ಮ". ಸಂಧ್ಯಾವಂದನೆಯಂತೆ ಇವೆರಡೂ ನಿತ್ಯ ಕ್ರಿಯೆಗಳು. ಇವುಗಳನ್ನು ಆಚರಿಸದಿದ್ದರೆ ಪಾಪವಿದೆ.

  
ಉತ್ಸರ್ಜನದ ಮಹತ್ವ- "ಅಧೀತಾನಾಂ ಛಂದಸಾಂ ಯಾತಯಾಮತಾ ನಿರಾಸಾರ್ಥಂ ಉತ್ಸರ್ಜನಂ " ಎನ್ನುವ ಮಾತಿನಂತೆ  ಬ್ರಾಹ್ಮಣ ತಾನು ಮಾಡಿದ ವೇದಮಂತ್ರಗಳ ಯಾತಯಾಮತ್ವ(ದುರ್ಬಲತೆ)ವನ್ನು ಪರಿಹರಿಸಿಕೊಳ್ಳಲು "ಉತ್ಸರ್ಜನ" ಕರ್ಮವು ಅತ್ಯವಶ್ಯವಾಗಿದೆ.ವೇದಮಂತ್ರಗಳು ದುರ್ಬಲವಾಗುವದಕ್ಕೆ ಕಾರಣಗಳಾವುವು? ಎನ್ನುವುದನ್ನು  ಗಮನಿಸಬೇಕು.

  • ನಾವು ವೇದಮಂತ್ರಗಳನ್ನು ಆಸನಬಧ್ದವಾಗಿ, ಛಂದೋಬದ್ಧವಾಗಿ ಉಚ್ಚರಿಸುವುದಿಲ್ಲ.
  •  ಮಂತ್ರೋಚ್ಚಾರಣೆಗೆ ಇರುವ ಯೋಗ್ಯ ದೇಶ -ಕಾಲಾದಿಗಳ ನಿಯಮವನ್ನು ನಾವು ಅನುಸರಿಸುವುದಿಲ್ಲ.
  •  ಅಯೋಗ್ಯರಿಗಾಗಿ ಅವುಗಳನ್ನು ಪ್ರಯೋಗಿಸಿರುತ್ತೇವೆ.

    ಇವೇ ಮೊದಲಾದ ದೋಷಗಳಿಂದ ವೇದ ಮಂತ್ರಗಳು ಸಬಲವಾಗಲು ಉತ್ಸರ್ಜನ ಕ್ರಿಯೆಯು ಅತ್ಯವಶ್ಯ.
 
 ಉಪಾಕರ್ಮದ ಮಹತ್ವ.
         "ಅಧ್ಯೇಷ್ಯಮಾಣಾನಾಂ ಛಂದಸಾಂ ಸವೀರ್ಯತ್ವಾಯ" ಎನ್ನುವ ಮಾತಿನಂತೆ ನಾವು ಮುಂದೆ ಅಧ್ಯಯನ ಮಾಡುವ ಮಂತ್ರಗಳು  ಸಬಲವಾಗಲು ಉಪಾಕರ್ಮವು ಅತ್ಯವಶ್ಯವಾಗಿದೆ. ವೇದಮಂತ್ರಗಳನ್ನು ಕಂಡುಕೊಂಡು ಅವುಗಳನ್ನು ನಮಗಾಗಿ ಅನುಗ್ರಹಿಸಿದವರು ಋಷಿಗಳು. ಆ ಋಷಿಗಳ ಆರಾಧನೆಯೇ  ಈ ಉಪಾಕರ್ಮ. ಈ ಕರ್ಮಕ್ಕೆ ಒಳಪಡದಿದ್ದರೆ ನಿತ್ಯ ಕರ್ಮಾನುಷ್ಠಾನದ ಯೋಗ್ಯತೆಯನ್ನೇ ಕಳೆದುಕೊಳ್ಳುತ್ತಾನೆ.

      ಲೇಖನ ಮಾಹಿತಿ- ಬಂಡಿ ಶಾಮಾಚಾರ್ಯ ಮಂತ್ರಾಲಯ