Sri Suyateendra Teertha Swamiji at Kolhapur

HH Sri Swamiji at Kollhapur

 

ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನಾಧೀಶ್ವರರಾದ ಶ್ರೀ ಶ್ರೀ ಸುಯತೀಂದ್ರ ತೀರ್ಥರು ೨೩-೦೬-೨೦೧೨ರಂದು ಕರ್ನಾಟಕ ಗಡಿಭಾಗದಲ್ಲಿರುವ ಕೊಲ್ಹಾಪುರಕ್ಕೆ ಭೇಟಿ ನೀಡಿದರು. ಇಲ್ಲಿನ ಶಾಖಾ ಮಠದಲ್ಲಿ ಪ್ರಾತಃ ಆಹ್ನೀಕಾದಿಗಳನ್ನು ಮುಗಿಸಿದ ಶ್ರೀಪಾದಂಗಳವರು ಇಲ್ಲಿ ಕರವೀರನಿವಾಸಿನಿ ಶ್ರೀಮಹಾಲಕ್ಷ್ಮಿ ದೇವಸ್ಥಾನಕ್ಕೆ ಶಿಷ್ಯರೊಂದಿಗೆ ತೆರಳಿ ಇಲ್ಲಿ ನೆಲೆಸಿರುವ ಸಾಕ್ಷಾತ್ ಶ್ರೀ ಮಹಾಲಕ್ಷ್ಮಿಯ ದರ್ಶನ ಮಾಡಿದರು.  ದೇವಸ್ಥಾನದ ಅರ್ಚಕರು ಹಾಗೂ ಅಧಿಕಾರಿಗಳು ಪರಮಪೂಜ್ಯ ಶ್ರೀಸುಯತೀಂದ್ರ ತೀರ್ಥ ಶ್ರೀ ಪಾದಂಗಳವರನ್ನು ಆದರದಿಂದ ಬರಮಾಡಿಕೊಂಡು ಶ್ರೀ ಮಹಾಲಕ್ಷ್ಮಿದೇವಿಯ ಸನ್ನಿಧಾನಕ್ಕೆ ಕರೆದುಕೊಂಡು ಹೋದರು. ಸುಮಾರು ೪೫ನಿಮಿಷಕ್ಕೂ ಹೆಚ್ಚುಹೊತ್ತು ಲಕ್ಷ್ಮೀದೇವಿಯ ಸನ್ನಿಧಾನದಲ್ಲಿ ಕುಳಿತಿದ್ದ ಶ್ರೀಗಳವರ ಕೈಯಿಂದ ವಿಶೇಷ ಪೂಜೆ ಮಾಡಿಸಿದರು. ನಂತರ ದೇವಸ್ಥಾನದ ಅರ್ಚಕರಿಗೆ ಹಾಗೂ ಅಧಿಕಾರಿಗಳಿಗೆ ಶೇಷವಸ್ತ್ರ ಹೊದಿಸಿದ ಶ್ರೀಗಳು ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. 
 
ಕರವೀರನಿವಾಸಿನಿ ಶ್ರೀಮಹಾಲಕ್ಷ್ಮಿದೇವಿಯ ದರ್ಶನಾನಂತರ ಇಲ್ಲಿನ ಶಾಖಾ ಮಠದಲ್ಲಿ ಶ್ರೀವಿಠ್ಠಲ-ರುಕ್ಮಿಣಿ ಮತ್ತು ಶ್ರೀರಾಘವೇಂದ್ರಸ್ವಾಮಿಗಳ ಸನ್ನಿಧಾನದಲ್ಲಿ ಶ್ರೀ ಮೂಲರಾಮನ ಪೂಜೆ ನೆರವೇರಿಸಿದರು. ನಂತರ ಇಲ್ಲಿನ ಶ್ರೀ ಸುಜಯೀಂದ್ರ ತೀರ್ಥ  ಶ್ರೀರಾಘವೇಂದ್ರಸ್ವಾಮಿಗಳ ಮೃತ್ತಿಕಾ ಬೃಂದಾವನಕ್ಕೆ ಹಸ್ತೋದಕ ಸಮರ್ಪಿಸಿದ ಶ್ರೀಗಳು ಮಹಾಮಂಗಳಾರತಿ ನೆರವೇರಿಸಿದರು. 
 
ಕೊಲ್ಲಾಪುರಕ್ಕೆ ಬೇಟಿ ನೀಡಿದ ಮಂತ್ರಾಲಯ ಮಠಾಧೀಶರಾದ ಪರಮಪೂಜ್ಯ ಶ್ರೀಶ್ರೀ ಶ್ರೀ ಸುಯತೀಂದ್ರ ತೀರ್ಥರ ಹಾಗೂ ಮೂಲರಾಮನ ದರ್ಶನಕ್ಕಾಗಿ ಕೊಲ್ಹಾಪುರದಲ್ಲಿನ ಮಾಧ್ವಬಂಧುಗಳು ಶ್ರೀ ಮಠಕ್ಕೆ ಆಗಮಿಸಿ ಶ್ರೀ ಮೂಲರಾಮನ ಪೂಜೆ ವೀಕ್ಷಿಸಿ ಪರಂಪರಾಗತವಾಗಿ ಬಂದ ಸಂಸ್ಥಾನ ಪ್ರತಿಮೆಗಳ ದರ್ಶನ ಮಾಡಿ ಶ್ರೀಗಳಿಗೆ ಪಾದ ಪೂಜೆ ಮಾಡಿದರು. ಪಾದಪೂಜೆ ಸ್ವೀಕರಿಸಿದ ಶ್ರೀಪಾದಂಗಳವರು ಎಲ್ಲರಿಗೂ ತಪ್ತಮುದ್ರಾಧಾರಣೆ ಮಾಡಿ,ಫಲ-ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.

 

Sri Swamiji at Kolhapur

Sri Suyateendra Teertha Swamiji at Kolhapur

Sri Suyateendra Teertha Swamiji at Kolhapur

Sri Suyateendra Teertha Swamiji at Kolhapur