Shri Padmanabha Teerthara Aradhana Mahotsava - Navabrindavana - 2013

ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರಾದ, ಶ್ರೀಮಠದ ಪೂರ್ವೀಕ ಗುರುಗಳಾದ   ಶ್ರೀ ಪದ್ಮನಾಭ ತೀರ್ಥರ ಆರಾಧನಾ ಮಹೋತ್ಸವವು  ಅವರ ವೃಂದಾವನ ಸನ್ನಿಧಾನವಿರುವ ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿ ಶ್ರೀಮಠದ ವತಿಯಿಂದ ವಿಜೃಂಭಣೆಯಿಂದ ನೆರವೇರಿತು.ಶ್ರೀಮನ್ಮಂತ್ರಾಲಯ ಮಠಾಧೀಶರಾದ ಪರಮಪೂಜ್ಯ  ಶ್ರೀ ಶ್ರೀ ಸುಯತೀಂದ್ರ ತೀರ್ಥ ಶ್ರೀಪಾದಂಗಳವರು ಹಾಗೂ  ಉತ್ತರಾಧಿಕಾರಿಗಳಾದ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ನವವೃಂದಾವನ ಕ್ಷೇತ್ರಕ್ಕೆ ದಿಗ್ವಿಜಯ  ಮಾಡಿ ಆರಾಧನಾ ಮಹೋತ್ಸವವನ್ನು ನೆರವೇರಿಸಿದರು.

ಪೂಜ್ಯ ಉಭಯ ಶ್ರೀಪಾದಂಗಳವರಿಂದ  ಪಂಚಾಮೃತ ಅಭಿಷೇಕವು . ನೆರೆದಿದ್ದ  ಜನರಿಗೆ ಮುದ್ರಾಧಾರಣೆ ಹಾಗೂ ಶ್ರೀಮನ್ಮೂಲರಾಮದೇವರ ಸಂಸ್ಥಾನ ಪೂಜೆ  ಅತಿವೈಭವದಿಂದ  ನಡೆಯಿತು. ಸಹಸ್ರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Click here for more photos.