Renovation work at Mantralayam Mutt

ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರ ಮೂಲಮಹಾಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಇನ್ನು ಕೆಲದಿನಗಳಲ್ಲಿ ಹೊಸದಾಗಿ ಕಂಗೊಳಿಸಲಿದೆ. ಶ್ರೀ ಮಠದ ಒಳಪ್ರಾಕಾರದ ಅಂದ ಹೆಚ್ಚಿಸಲು ನೆರಳಿಗಾಗಿ ಹಾಕಿರುವ ತಗಡಿನ ಶೆಡ್ ಅನ್ನು ಇನ್ನೂ ಎತ್ತರಕ್ಕೇರಿಸಿ ಒಳಪ್ರಾಕರವನ್ನು ವಿಸ್ತಾರಗೊಳಿಸುವ ಕಾಮಗಾರಿ ನಡೆಯುತ್ತಿದೆ. ಶ್ರೀಮಠದ ಪ್ರಾಕಾರದ ಶೆಡ್ ನ ಎತ್ತರ ಹೆಚ್ಚಿಸಿದರೆ ಒಳಪ್ರಾಕಾರ ಹಾಗೂ ಶ್ರೀ ಮಠದ ಗೋಪುರ ಎಲ್ಲವೂ ಭಕ್ತರಿಗೆ ಕಾಣುವಂತಾಗುತ್ತದೆ. ಹೊಸದಾಗಿ ನಿರ್ಮಾಣವಾಗುವ ಶೆಡ್ ನ ಒಟ್ಟು ಎತ್ತರ ೩೦ಅಡಿ. ಶ್ರೀ ಮಠದ ಪ್ರಾಕಾರದ ನೆಲಕ್ಕೆ ಗ್ರಾನೈಟ್ ಕಲ್ಲು ಹಾಕಿಸಲಿದ್ದು ತತ್ಪೂರ್ವದಲ್ಲಿ ಸಿಮೆಂಟ್ ಹಾಕಿದ್ದಾರೆ. ಈ ಎಲ್ಲಾ ಕಾಮಗಾರಿಗಳನ್ನು ಮಳೆಗಾಲ ಪ್ರಾರಂಭವಾಗುವುದರ ಒಳಗೆ ಮುಗಿಸಬೇಕಾಗಿದ್ದುದರಿಂದ ಕೆಲಸ ಬಿರುಸಿನಿಂದ ನಡೆದಿದ್ದು ಸದ್ಯಕ್ಕೆ ೧೫ರಿಂದ ೨೦ ದಿನಗಳ ಕಾಲ ಭಕ್ತರಿಗೆ ಸ್ವಲ್ಪ ಅಡಚಣೆಯಾಗಲಿದ್ದು ದಯವಿಟ್ಟು ಸಹಕರಿಸಬೇಕೆಂದು ಯಾತ್ರಿಕರು ಹಾಗೂ ಭಕ್ತಾದಿಗಳಲ್ಲಿ ವಿನಂತಿ.

Since there is a rapid increment in devotees's rush to Mantralaya, the administration has taken up several developmental works in Mantralaya Prakara. His Holiness Sri Swamiji has decided to elevate the current truss roof to further 15ft high so that the courty yard gets more ventilation and space than the present one. Also the age old floor too is getting renovated. New uniform sized texture granite slabs will be embeded for flooring so that devotees can perfrom Anga Pradakshina much easier. The cement concrete work of this projecte has already been finished. As all these works are to be completed before the rainy seson starts up. Devotees may get a little inconvinient during their visit to Mantralaya. Your cooperation is requested. We deeply regret for the inconvience.  

Mantralaya, Development works

Mantralaya, Development works

Mantralaya, Development works