Mari Abhisheka on yamadvitiya by Sri Suyateendra teertharu at Hyderabad

ಹೈದರಾಬಾದಿನ ಬರ್ಖತ್ಪುರ ರಾಯರಮಠದಲ್ಲಿ ಶ್ರೀಸುಯತೀಂದ್ರತೀರ್ಥಶ್ರೀ ಪಾದಂಗಳವರಿಂದ ಅಭಿಷೇಕ;

ಕಾರ್ತೀಕಮಾಸದ ಎರಡನೇ ದಿನವಾದ ದ್ವಿತೀಯಾದಂದು ಅಂದರೆ ಬಲಿಪಾಡ್ಯಮಿಯ ಮರುದಿನ ಶ್ರೀ ಮಠದಲ್ಲಿ ಮತ್ತೊಮ್ಮೆ ಮೂಲರಾಮಾದಿ ಪ್ರತಿಮೆಗಳಿಗೆ ಅಭಿಷೇಕವನ್ನು ಮಾಡಲಾಗುತ್ತದೆ. ಇದಕ್ಕೆ "ಮರಿ ಆಭಿಷೇಕ"ಎನ್ನುತ್ತಾರೆ. ಇಂದು ಬೆಳಗ್ಗೆ
ಶ್ರೀಗಳವರು ಅಭಿಷೇಕಕ್ಕೂ ಮುನ್ನ ನಿನ್ನೆ ಮೂಲರಾಮನಿಗೆ ಲೇಪಿಸಿದ ಗಂಧವನ್ನು ತನ್ಮತೆಯಿಂದ ತೆಗೆದು ಅಭಿಷೇಕಕ್ಕೆ ಸಜ್ಜುಗೊಳಿಸಿದರು. ನಂತರ ಕ್ಷೀರಸಾಗರದೊಡೆಯನಿಗೆ ಕ್ಷೀರಾಭಿಷೇಕ ಪ್ರಾರಂಭವಾಯಿತು. ಶೀ ಸುಯತೀಂದ್ರ ತೀರ್ಥರು ಅತ್ಯಂತಪ್ರೀತಿಯಿಂದ ಬ್ರಹ್ಮಾಂಡದೊಡೆಯ, ಬ್ರಹ್ಮದೇವರ ಕರಾರ್ಚಿತ ಶ್ರೀಮನ್ ಮೂಲರಾಮನಿಗೆ ಹಾಲು,ಮೊಸರು, ತುಪ್ಪ ಜೇನುತುಪ್ಪ,ಬಾಳೆಹಣ್ಣು ಹಾಗೂ ಎಳನೀರಿನಿಂದ ಅಭಿಷೇಕ ಮಾಡಿದರು. ನಂತರ ರಾಯರ ಮೂಲಮೃತ್ತಿಕಾ ಬೄಂದಾವನಕ್ಕೆ
ಶ್ರೀಮನ್ಮೂಲರಾಮದೇವರಿಗೆ ಮಾಡಿದ ಪಂಚಾಮೃತವನ್ನು ಅಭಿಷೇಕ ಮಾಡಿದರು. ಈ ಸಮಯದಲ್ಲಿ ಶ್ರೀ ಮಠದ ಶಿಷ್ಯರಾದ ಬೆಂಗಳೂರಿನ ಶ್ರೀವಾಮನ ಅವರು ಶ್ರೀ ಮೂಲರಾಮನಿಗೆ ವಜ್ರಖಚಿತವಾದ ಚಿನ್ನದ ಹಾರವನ್ನು ಸಮರ್ಪಿಸಿದರು. ಈ ಹಾರವನ್ನುಶ್ರೀಗಳವರು ಪೂಜಾ ಸಮಯದಲ್ಲಿ ಶ್ರೀ ರಾಮನಿಗೆ ತೊಡಿಸಿ ಸಂತೋಷಪಟ್ಟರು ಹಾಗೂ ನೆರೆದ ನೂರಾರು ಭಕ್ತರ ಮನಸ್ಸಂತೋಷಗೊಳಿಸಿದರು. ಇಂದೂ ಕೂಡಾ ಶ್ರೀ ರಾಮಚಂದ್ರ ದೇವರ ಅಭಿಷೇಕ ನೋಡಲು ಸಹಸ್ರಾರು ಮಂದಿ  ಸೇರಿದ್ದರು.

ಮರಿಅಭಿಷೇಕದ ಅಭಿಷೇಕದ ನಂತರ ಶ್ರೀಮೂಲ-ದಿಗ್ವಿಜಯ-ಜಯರಾಮದೇವರುಗಳಿಗೆ ಊರ್ಧ್ವಾರ್ಚನೆ ಮಾಡಿ ಕೊನೆಯದಾಗಿ  ಮತ್ತೊಮ್ಮೆ ಶುದ್ದ ನೀರಿನಿಂದ ಅಭಿಷೇಕವನ್ನು ಮಾಡುತ್ತಾರೆ. ಇದನ್ನು ಸಂಗ್ರಹ ಮಾಡಿ ಮಠದ ಎಲ್ಲ ಶಿಷ್ಯರೂ ಸ್ವೀಕರಿಸುತ್ತಾರೆ. ಇದಕ್ಕೆ "ಕಿಲುಬು" ಎನ್ನಲಾಗುತ್ತದೆ. ಸನಾತನ ಕಾಲದಿಂದ ಬಂದ ಶ್ರೀಮೂಲರಾಮನಿಗೆ ವರ್ಷದಲ್ಲಿ ೨ದಿನ ಅಭಿಷೇಕ ಮಾಡುತ್ತಾರೆ. ಅಭಿಷೇಕದ ನಂತರ ಊರ್ಧ್ವಾರ್ಚನೆ ಮಾಡುತ್ತಾರೆ. ಈ ನೀರು ಎಲ್ಲರಿಗೂ ಪರಮಪವಿತ್ರ. ವರ್ಷಕ್ಕೊಮ್ಮೆ ಸಿಗುವ ಈ ತೀರ್ಥದಲ್ಲಿ  ವಿಶೇಷ ಶಕ್ತಿ ಇರುತ್ತದೆ ಎಂಬುದು ಭಕ್ತರ ನಂಬಿಕೆ.

ಪೂಜಾದಿಗಳನ್ನು ಮುಗಿಸಿದ ಶ್ರೀ ಗಳು ನೆರೆದ ಎಲ್ಲ ಭಕ್ತರಿಗೂ ಫಲಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.ಪ್ರತಿನಿತ್ಯದಂತೆ ಇಂದೂ ಕೂಡಾ ಸುದರ್ಶನ ಹೋಮವನ್ನು ನಡೆಸಲಾಯಿತು. ಈ ಮಧ್ಯದಲ್ಲಿ ಇಲ್ಲಿನ ಶ್ರೀ ರಾಘವೇಂದ್ರಸ್ವಾಮಿಗಳ ಬೃಂದಾವನಕ್ಕೆ ಮಾಡಿದ್ದ ಅಲಂಕಾರ ಅತ್ಯಂತ ಆಕರ್ಷಕವಾಗಿತ್ತು.

ನೂರಾರು ಚಿತ್ರಗಳು ಇಲ್ಲಿವೆ!

ಚಿತ್ರ ಹಾಗು ವರದಿ :ವಿಜಯಧ್ವಜ

​On divitiya, the 2nd day of Kartikamasa, again abhisheka will be performed to Sri Moolarama and other idols in Srimatha. This is known as Mari Abhisheka. Today His Holiness Srigalavaru prepared Srimoolarma for this Abhisheka with an affectionate involvement by removing the sandal paste coated on them. Later Ksheerabhisheka (Abhisheka with Milk) was started to the Lord of Ksheera Sagara. Sri Suyateendra teertharu with a great love performed abhisheka with Milk, Curds, Ghee, Honey, Bananas and Tendercoconut water.  After completion of this abhisheka, with the same panchamruta, the Panchamruta of Sri Rayaru was also performed.  On this sacred moment, one Sri Vaman offered diamond studded necklace to Lord Srimoolarama. Sri Srigalu adorned Sri Moolarama with this necklace and made every one happy. Today also there were thousands of devotees gathered to watch Mariabheska.

The process of taking off the entire abhisheka from Moolarama is called Udvarchana. After this, the idols will be cleansed with holy water. Later this holy water all be received by every one with devotion. This is known as 'Kilubu' (scientifically Copper Sulfate).  Abhisheka for this ancient idol of Moolarama will be performed only twice in year. Udwarchana will be done after this abhisheka. Hence this water will be considered to be powerful.  

After completion of Samsthana pooja, His Holiness blessed every one with Phala Mantrakshate. Today also Sri Sudarshana homa was there. The decoration of Sri Raghavendra Teertha's Mrittika Vrindavana was eye catchy.

 

Click here for hundreds of photos