Sri Nrusimha Krupavalokana Prarthana Stuti:

 

ಶ್ರೀನೃಸಿಂಹಕೃಪಾವಲೋಕನಪ್ರಾರ್ಥನಾಸ್ತುತಿ:

 

          ಭವಿಷ್ಯೋತ್ತರ ಪುರಾಣದಲ್ಲಿ ಬರುವ ಸ್ತೋತ್ರವಿದು. ಶನೈಶ್ಚರನು ಶ್ರೀನೃಸಿಂಹನನ್ನು ಸ್ತುತಿಸುತ್ತಾ ಅವನ ಕೃಪಾದೃಷ್ಟಿಯನ್ನು ಯಾಚಿಸುತ್ತಿರುವನು. ಆ ನೄಸಿಂಹ ಪಾದಧೂಳಿಯನ್ನು ಸಂಸೇವಿಸಿದವರ ಸಕಲ ಪಾಪರಾಶಿ ನಾಶವಾಗಿ ಕಲ್ಯಾಣವಾಗುವುದು. ಎಲ್ಲೆಡೆಯಲ್ಲಿಯೂ ಚಂಚಲಳಿನಿಸಿದ ಲಕ್ಷ್ಮಿಯೂ ಬ್ರಹ್ಮಾದಿಮಧ್ಯಳಾಗಿದ್ದರೂ ಭಗವಂತನ ಪಾದಕಮಲಗಳನ್ನು ಪರಮಾದರದಿಂದ ಸೇವಿಸುತ್ತಿರುವಳು. ಅಧ್ಯಾತ್ಮಿಕ, ಆದಿಭೌತಿಕ, ಆದಿದೈವಿಕ ತಾಪತ್ರಯ ಪರಿಹಾರಕವಾದ ಉಪನಿಷತ್ತುಗಳಿಂದ ಪ್ರತಿಪಾದ್ಯವಾದ ನಿಖಿಲದೋಷದೂರರಾದ ಯೋಗಿಗಳಿಂದ ಧ್ಯಾನಿಸಲ್ಪಡುವ ರೂಪ ಆ ಭಗವಂತನದ್ದು. ತನ್ನ ಭಕ್ತ ಪ್ರಹ್ಲಾದನ ಮಾತನ್ನು ಸತ್ಯವನ್ನಾಗಿಸಲು ಕಂಬದಿಂದ ಆವಿರ್ಭವಿಸಿ ಹಿರಣ್ಯನನ್ನು ತೊಡೆಯಲ್ಲಿ ಇಟ್ಟುಕೊಂಡು ಅವನ ಎದೆಯನ್ನು ತನ್ನನಖಗಳಿಂದ ಸೀಳಿದವನು ಶ್ರೀನೃಸಿಂಹ. ಹೀಗೆ ಎಂಟು ಪದ್ಯಗಳಲ್ಲಿ ನೃಸಿಂಹನನ್ನು ಸ್ತುತಿಸುತ್ತಾ ಅವನ ಕೃಪಾವಲೋಕವನ್ನು ಪ್ರಾರ್ಥಿಸಲಾಗಿದೆ. ಇಂಥ ಸ್ತುತಿಯಿಂದ ಪ್ರಸನ್ನನಾದ ಭಗವಂತನು ಶನೈಶ್ಚರನಿಗೆ ವರವನ್ನು ಕೊಡಲು ಉದ್ಯುಕ್ತನಾದಾಗ ಶನೈಶ್ಚರನ್ನು ತನ್ನಲ್ಲಿ ಕೃಪೆಯನ್ನು ಮಾಡಬೇಕೆಂದು ಪ್ರಾರ್ಥಿಸುತ್ತಾ ಶನಿವಾರವು ಭಗವಂತನಿಗೆ ಪ್ರಿಯಕರವಾಗಲಿ ಎಂದು ಕೇಳಿ ಅಂತಹ ಶನಿವಾರದಂದು ಯಾರು ನಾನು ಮಾಡಿದ ನಿನ್ನ ಈ ಸ್ತೋತ್ರವನ್ನು  ಕೇಳುವರೋ, ಪಠಿಸುವರೋ ಅವರ ಎಲ್ಲಾ ಕಾಮಿತಾರ್ಥಗಳನ್ನು ಪೂರೈಸಬೇಕು ಎಂದು ಬೇಡುತ್ತಾನೆ. ಶ್ರೀನೃಸಿಂಹನು ತಥಾಸ್ತು ಎಂದು ಹೇಳಿ, ತನ್ನ ಈ ಸ್ತೋತ್ರವನ್ನು ಯಾರು ಪಠಿಸುವರೋ ಅವರ ಕಾಮಿತಾರ್ಥಗಳನ್ನೆಲ್ಲಾ ಈಡೇರಿಸುವುದಲ್ಲದೇ ದ್ವಾದಶ, ಅಷ್ಟಮ, ಜನ್ಮಶ್ಥ ಶನಿಯ ಭಯವು ಇಲ್ಲದಂತೆ ಅನುಗ್ರಹಿಚುವೆನೆಂದು ನೃಸಿಂಹನು ವರವನ್ನು ನೀಡುತ್ತಾನೆ. ಇಂತಹ ಶನೈಶ್ಚರ-ನೃಸಿಂಹ ಸಂವಾದವನ್ನು ಯಾವನು ಭಕ್ತಿಯಿಂದ ಕೇಳುತ್ತಾನೋ, ಕೇಳಿಸುತ್ತಾನೋ ಅವನ ಎಲ್ಲ ಅಭೀಷ್ಟಗಳನ್ನು ಪಡೆಯುತ್ತಾನೆ.

          ಗ್ರಹಗಳ ಸಂಚಾರರೀತ್ಯಾ ಶನೈಶ್ಚರನು ತುಲಾರಾಶಿಯಲ್ಲಿ ಸಂಚರಿಸಿದ್ದಾನೆ (ದಿನಾಂಕ 03-ನವಂಬರ್-2014 ವರಿಗು). ಹಾಗಾಗಿ ತುಲಾರಾಶಿಯವರಿಗೆ ಜನ್ಮಶನಿಯು, ವೃಶ್ಚಿಕರಾಶಿಯವರಿಗೆ ದ್ವಾದಶಶನಿಯು, ಮೀನರಾಶಿಯವರಿಗೆ ಅಷ್ಟಮಶನಿಯು ಮತ್ತು ಕರ್ಕರಾಶಿಯವರಿಗೆ ಅರ್ದಾಷ್ಟಮಶನಿಯು ನಡೆಯುತ್ತಿದೆ. ಶನೈಶ್ಚರನು 19-ನವಂಬರ್-2014 ಅನಂತರ ವೃಶ್ಚಿಕರಾಶಿಯಲ್ಲಿ ಪ್ರವೇಶಮಾಡುತ್ತಾನೆ (ದಿನಾಂಕ 27-ಅಕ್ಟೋಬರು -2017 ವರಿಗು). ಈ ಮಧ್ಯಕಾಲದಲ್ಲಿ ಧನುರಾಶಿಯವರಿಗೆ ಶನೈಶ್ಚರನು ದ್ವಾದಶದಲ್ಲಿಯೂ, ವೃಶ್ಚಿಕರಾಶಿಯವರಿಗೆ ಜನ್ಮರಾಶಿಯಲ್ಲಿಯೂ, ಮೇಷರಾಶಿಯವರಿಗೆ ಅಷ್ಟಮರಾಶಿಯಲ್ಲಿಯೂ, ಸಿಂಹರಾಶಿಯವರಿಗೆ ಅರ್ದಾಷ್ಟಮರಾಶಿಯಲ್ಲಿಯೂ ಸಂಚರಿಸುವನು. ಹಾಗಾಗಿ ಮೇಲೆ ತಿಳಿಸಿದ ಕಾಲದಲ್ಲಿ ಜನ್ಮಶನಿ, ಅಷ್ಟಮಶನಿ, ಅರ್ದಾಷ್ಟಮಶನಿ ಮತ್ತು ದ್ವಾದಶಶನಿ ನಡೆಯುವ ರಾಶಿವುಳ್ಳವರು “ಶ್ರೀನೃಸಿಂಹಕೃಪಾವಲೋಕನಪ್ರಾರ್ಥನಾಸ್ತುತಿಯನ್ನು ಪಾರಯಣಮಾಡುವದು ಉತ್ತಮವಾದ ಮಾರ್ಘ. ಶ್ರೀನೃಸಿಂಹಕೃಪಾವಲೋಕನಪ್ರಾರ್ಥನಾಸ್ತುತಿಯನ್ನು ಅನು ನಿತ್ಯ ಪಾರಾಯಣಮಾಡುವುದರಿಂದ ಶ್ರೀನೃಸಿಂಹದೇವರ ಅನುಗ್ರಹದಿಂದ, ಶನಿಯ ಆಶೀರ್ವಾದದಿಂದ ಮಾನಸಿಕ ಮತ್ತು ಶಾರೀರಕ ತೊಂದರೆಗಳು ಕಾಡುವುದಿಲ್ಲ.

 

ಶ್ರೀಕೃಷ್ಣ ಉವಾಚ -

ಸುಲಭೋ ಭಕ್ತಿಯುಕ್ತಾನಾಂ ದುರ್ದಶೋ ದುಷ್ಟಚೇತಸಾಮ್ |

ಅನನ್ಯಗತಿಗಾನಾಂ ಚ ಪ್ರಭುಃ ಭಕ್ತೈಕವತ್ಸಲಃ

ಶನೈಶ್ಚರಸ್ತತ್ರ ಸೃಸಿಂಹದೇವಸ್ತುತಿಂ ಚಕಾರಾಮಲಚಿತ್ತವೃತ್ತಿಃ |

ಪ್ರಣಮ್ಯ ಸಾಷ್ಟಾಂಗಮಶೇಷಲೋಕಕಿರೀಟಿನೀರಾಜಿತಪಾದಪದ್ಮಮ್ ||

 

ಶ್ರೀಶನೈಶ್ಚರ ಉವಾಚ –

ಯತ್ಪಾದಪಂಕಜರಜಃ ಪರಮಾದರೇಣ

ಸಂಸೇವಿತಂ ಸಕಲಕಲ್ಮಷರಾಶಿನಾಶಮ್ |

ಕಲ್ಯಾಣಕಾರಣಮಶೇಷನಿಜಾನುಗಾನಾಂ

ಸ ತ್ವಂ ಸೃಸಿಂಹ ಮಯಿ ಧೇಹಿ ಕೃಪಾವಲೋಕಮ್ ||

 

ಸರ್ವತ್ರ ಚಂಚಲತಯಾ ಸ್ಥಿತಯಾ ಚ ಲಕ್ಷ್ಮ್ಯಾ

ಬ್ರಹ್ಮಾದಿವಂದ್ಯಪದಯಾ ಸ್ಥಿರಯಾ ನ್ಯಸೇವಿ |

ಪಾದಾರವಿಂದಯುಗಲಂ ಪರಮಾದರೇಣ

ಸ ತ್ವಂ ಸೃಸಿಂಹ ಮಯಿ ಧೇಹಿ ಕೃಪಾವಲೋಕಮ್ ||

 

ಯನ್ನಿರ್ವಿಕಾರಪರರೂಪವಿಚಿಂತನೇನ

ಯೋಗೀಶ್ಚರಾ ವಿಶ್ಅಯವೀತಸಮಸ್ತರಾಗಾಃ |

ವಿಶ್ರಾಂತಿಮಾಪುರವಿನಾಶವತೀಂ ಪರಾಖ್ಯಾಂ

ಸ ತ್ವಂ ಸೃಸಿಂಹ ಮಯಿ ಧೇಹಿ ಕೃಪಾವಲೋಕಮ್ ||

 

ಯದ್ರೂಪಮುಗ್ರಮರಿಮರ್ದನಭಾವಶಾಲೀ-

ಸಂಚಿತನೇನ ಸಕಲಾಹವಭೀತಿಹಾರಿ |

ಭೂತಜ್ವರಗ್ರಹಸಮುದ್ಭವಭೀತಿನಾಶಂ

ಸ ತ್ವಂ ಸೃಸಿಂಹ ಮಯಿ ಧೇಹಿ ಕೃಪಾವಲೋಕಮ್ ||

 

ಯಸ್ಯೋತ್ತಮಂ ಯಶ ಉಮಾಪತಿಪದ್ಮ ಜನ್ಮ-

ಶಕ್ರಾದಿದೈವತಸಭಾಸು ಸಮಸ್ತಗೀತಮ್ |

ಶ್ರುತ್ಯೈವ ಸರ್ವಶಮಲಪ್ರಶಮೈಕದಕ್ಷಂ

ಸ ತ್ವಂ ಸೃಸಿಂಹ ಮಯಿ ಧೇಹಿ ಕೃಪಾವಲೋಕಮ್ ||

 

ಶ್ರೀಕೃಷ್ಣ ಉವಾಚ –

ಏವಂ ಶ್ರುತ್ವಾ ಸ್ತುತಿಂ ದೇವಃ ಶನಿನಾ ಕಲ್ಪಿತಾಂ ಹರಿಃ

ಉವಾಚ ಬ್ರಹ್ಮವೃಂದಸ್ಥಂ ಶನಿಂ ಸದ್ಭಕ್ತವತ್ಸಲಃ ||

 

ಶ್ರೀನೃಸಿಂಹ ಉವಾಚ –

ಪ್ರಸನ್ನೋಹಂ ಶನೇ ತುಭ್ಯಂ ವರಂ ವರಯ ಶೋಭನಮ್ |

ಯಂ ವಾಂಛಸಿ ತಮೇವ ತ್ವಂ ಸರ್ವಲೋಕಹಿತಾವಹಮ್ ||

 

ಶ್ರೀಶನೈಶ್ಚರ ಉವಾಚ –

ನೃಸಿಂಹ ತ್ವಂ ಮಯಿ ಕೃಪಾಂ ಕುರು ದೇವ ದಯಾನಿಧೇ |

ಮದ್ವಾಸರಸ್ತವಪ್ರೀತಿಕರಃ ಸ್ಯಾದ್ದೇವತಾಪತೇ ||

ಮತ ತಂ ತ್ವತ್ಸ್ತವಂ ಯೇ ವೈ ಶೃಣ್ವಂತಿ ಚ ಪಠಂತಿ ಚ |

ಸರ್ವಾನ್ ಕಾಮಾನ್ ಪೂರಯೇಥಾಸ್ತೇಷಾಂ ತ್ವಂ ಲೋಕಭಾವನ ||

 

ಶ್ರೀನೃಸಿಂಹ ಉವಾಚ –

ತಥೈವಾಸ್ತು ಶನೇಽಹಂ ವೈ ರಕ್ಷೋಭುವನಮಾಸ್ಥಿತಃ |

ಭಕ್ತಕಾಮಾನ್ ಪೂರಯಿಷ್ಯೇ ತ್ವಂ ಮಮೈಕಂ ವಚಃ ಶೃಣು ||

ತ್ವತ ತಂ ಮತ್ಪರಂ ಸ್ತೋತ್ರಂ ಯಃ ಪಠೇಶ್ಚ ಶೃಣೋತಿ ಯಃ |

ದ್ವಾದಶಾಷ್ಟಮಜನ್ಮಸ್ಥಂ ತ್ವದ್ಭಯಂ ಮಾಸ್ತು ತಸ್ಯ ವೈ ||

ಶನಿರ್ನರಹರಿಂ ದೇವಂ ತಥೇತಿ ಪ್ರತ್ಯುವಾಚ ಹ |

ತತಃ ಪರಮಸಂತುಷ್ಟಾಃ ಜಯೇತಿ ಮುನಯೋಽವದನ್ ||

 

ಶ್ರೀನೃಸಿಂಹ ಉವಾಚ –

ಇತ್ಥಂ ಶನೈಶ್ಚರಸ್ಯಾಥ ನೃಸಿಂಹದೇವಸಂವಾದಮೇತತ್ ಸ್ತವನಂ ಚ ಮಾನವಃ |

ಶ್ರುಣೋತಿ ಯಃ ಶ್ರಾವಯತೇ ಚ ಭಕ್ತ್ಯಾ ಸರ್ವಾನ್ಯಭೀಷ್ಟಾನಿ ಚ ವಿದಂತೇ ದ್ರುವಮ್ ||

 

|| ಇತಿ ಭವಿಷ್ಯೋತ್ತರಪುರಾಣೇ ರಕ್ಷೋಭುವನಪ್ರಸ್ತಾವೇ ಶನೈಶ್ಚರಕೃತಾ ಶ್ರೀನೃಸಿಂಹಕೃಪಾವಲೋಕನಪ್ರಾರ್ಥನಾಸ್ತುತಿಃ ||

 

Source: Stotra Sangraha, Mantralaya.