Sri Krishna Temple and New Shelter opening cermony in Goshala, Mantralayam.

ಶ್ರೀ ರಾಘವೇಂದ್ರ ಮಠ ಮಂತ್ರಾಲಯದ ವತಿಯ ಸಾಮಾಜಿಕ ಸೇವೆಯ ಒಂದು ಅಂಗವಾಗಿ ನಡೆಸುತ್ತಿರುವ ಗೋಶಾಲೆಯಲ್ಲಿ  ಸಾವಿರಾರು ಹಸುಗಳು ಆಶ್ರಯ  ಪಡೆದಿವೆ. ಶ್ರೀ ಮಠವು ಈ ಹಸುಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲು ಉದ್ದೇಶಿಸಿತ್ತು. ಈ ನಿಟ್ಟಿನಲ್ಲಿ ರಾಯರ ಭಕ್ತರೊಬ್ಬರು ಈ ಕಾರ್ಯದಲ್ಲಿ ಮುಂದೆ ಬಂದರು. ಇದರ ಫಲವಾಗಿ ಗೋಶಾಲೆಯಲ್ಲಿ ೮೦೦೦ಚದುರ ಅಡಿ ವಿಸ್ತಾರವಾದ ಜಾಗದಲ್ಲಿ ಗೋವುಗಳಿಗೆ ನಿಲ್ಲಲು, ವಿಶ್ರಾಂತಿ ತೆಗೆದುಕೊಳ್ಳಲು ಅರ್.ಸಿ.ಸಿ.ಛಾವಣಿಯುಳ್ಳ ಕೊಟ್ಟಿಗೆಯ ನಿರ್ಮಾಣವಾಗಿದೆ. ೩ ವಿಭಾಗ ಮಾಡಿರುವ ಈ ಕೊಟ್ಟಿಗೆಯಲ್ಲಿ ಒಟ್ಟಿಗೆ ಸಾವಿರಾರುಹಸುಗಳು ವಿಶ್ರಾಂತಿ ತೆಗೆದುಕೊಳ್ಳಬಹುದು, ಮಲಗಿಕೊಳ್ಳಬಹುದು.ಈ ಕೊಟ್ಟಿಗೆಯಲ್ಲಿ ಹುಲ್ಲು ಹಾಕಲು ಹಾಗೂ ನೀರು ಕುಡಿಯಲು ತೊಟ್ಟಿಯನ್ನು ನಿರ್ಮಿಸಲಾಗಿದೆ. ಇಷ್ಟಕ್ಕೇ ಈ ಯೋಜನೆ ಮುಗಿಯುವುದಿಲ್ಲ. ಗೋಶಾಲೆಯ ಮಧ್ಯಭಾಗದಲ್ಲಿ ಗೋವುಗಳ ಕಾಯ್ದ ಗೋಪಾಲ ಶ್ರೀ ಬಾಲ ವೇಣುಗೋಪಾಲನ ದೇವಸ್ಥಾನವನ್ನು ನಿರ್ಮಿಸಲಾಗಿದೆ. ೩೦-೦೧-೨೦೧೨ರಂದು ಈ ಗೋಪಾಲಕೃಷ್ಣನ ದೇವಸ್ಥಾನದ ಹಾಗೂ ಕೊಟ್ಟಿಗೆಯನ್ನು ಹೋಮಹವನಗಳೊಂದಿಗೆ ಗೋವುಗಳಿಗೆ ಹಾಗೂ ಗೋಪಾಲನಿಗೆ ಸಮರ್ಪಿಸಲಾಯಿತು. ಶ್ರೀಮಠದ ಪರವಾಗಿ ವ್ಯವಸ್ಥಾಪಕರು ಈ ಸಮಯದಲ್ಲಿ ಹಾಜರಿದ್ದು  ಈ ಕಟ್ಟಡಗಳ ದಾನಿಗಳಾದ  (ಕೊಟ್ಟಿಗೆ) ಶ್ರೀಮತಿ ಮತ್ತು ಶ್ರೀ ಡಾ. ಆರ್.ಸುಧೀಂದ್ರ ಮತ್ತು ಪೂರ್ಣಿಮಾ ಸುಧೀಂದ್ರ ಹಾಗೂ ಕುಟುಂಬ. ಶ್ರೀವೇಣುಗೋಪಾಲಕೃಷ್ಣನ ದೇವಸ್ಥಾನದ ದಾನಿಗಳಾದ ಶ್ರೀ.ಟಿ.ಎನ್.ರಾಮಕೃಷ್ಣರಾವ್ ಶ್ರೀಮತಿ ರಮಾಬಾಯಿ ಹಾಗೂ ಕುಟುಂಬ ಇವರುಗಳ ಕೈಯಿಂದ ಮಠದ ಪರವಾಗಿ ದಾನ  ಸ್ವೀಕರಿಸಿದರು.

ಇದು ನವೀಕರಣದ ಒಂದು ಹಂತವಾದರೆ. ಮುಂದಿನ ಹಂತಗಳಲ್ಲಿ ಗೋಶಾಲೆಯ ಹೊರಭಾಗದಲ್ಲಿ ಉದ್ಯಾನವನದ ನಿರ್ಮಾಣ ಹಾಗೂ ಗೋಶಾಲೆಯಲ್ಲಿ ಹಸುಗಳ ಅಭಿವೃದ್ಧಿಗಾಗಿ ಋಗ್ವೇದದಲ್ಲಿ ಕೆಲವು ಮಂತ್ರಗಳಿವೆ. ಆ ಮಂತ್ರವನ್ನು ಸಂಗೀತದ ಹಿನ್ನೆಲೆಯೊಂದಿಗೆ ಹಸುಗಳಿಗೆ ಕೇಳಿಸುವ ವ್ಯವಸ್ಥೆ ಮಾಡುವುದು. ಇದರಲ್ಲಿ ಮತ್ತೊಂದು ತರಹದ ಸಂಗೀತವಿದೆ. ಏನೆಂದರೆ ಎಲ್ಲಾ ಜೀವಿಗಳೂ ದಿನದ ೨೪ಘಂಟೆಗಳ ಅವಧಿಯಲ್ಲಿ ಕೇಳಬೇಕಾದ ವಿವಿಧರಾಗಗಳನ್ನು ಗೋಶಾಲೆಯಲ್ಲಿ ಅಳವಡಿಸಲಾಗುವುದು. ಈ ತರದ ಹಲವು ಯೋಜನೆಗಲಿವೆ. ಈ ಸೇವೆಗಳಲ್ಲಿ ಪಾಲ್ಗೊಳ್ಳುವವರಿಗೆ ಅವಕಾಶವಿದೆ. ಆಸಕ್ತರು ಗೋಶಾಲಾ ವ್ಯವಸ್ಥಾಪಕರಾದ ಶ್ರೀ ಸೂರ್ಯಚಂದ್ರಶೇಖರ(ಸೂರಿ) ಅವರನ್ನು ಸಂಪರ್ಕಿಸಬಹುದು.ಇವರ ದೂರವಾಣಿ ಸಂಖ್ಯೆ. 9440591113.

Click here for more images

Posted in: