Shri Rudra Devara Song writen by Shri Vijayavittala Dasaru

ಮನೋನಿಯಾಮಕರಾದ ಶ್ರೀ ರುದ್ರ ದೇವರ ಕುರಿತು ಶ್ರೀ ವಿಜಯವಿಠ್ಠಲ ದಾಸರು ಮಾಡಿದ ಕ್ರುತಿ.

 

ಕೈಲಾಸ ವಾಸ ಗೌರೀಶ ಈಶ | ತೈಲ ಧಾರೆಯ೦ತೆ ಮನಸು ಕೊಡು ಹರಿಯಲ್ಲಿ           ||ಪ||

 

ಅಹೋ ರಾತ್ರಿಯಲಿ ನಾನು ಅನುಚರಾಗ್ರಣಿಯಾಗಿ | ಮಹಿಯೊಳಗೆ  ಚರಿಸಿದೆನೊ ಮಹದೇವನೆ ||

ಅಹಿಭೂಷಣನೆ ಎನ್ನವಗುಣಗಳೆಣಿಸದಲೆ | ವಿಹಿತಧರ್ಮದಿ ವಿಷ್ಣುಭಕುತಿಯನು ಕೊಡು ಶ೦ಭೋ||೧||

 

ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ | ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ | ದನುಜ ಮದ

ಗಜ ಹಾರಿ ದ೦ಡಪ್ರಣಾಮವ ಮಾಳ್ಪೆ | ಮಣಿಸೋ ಈ ಶಿರವ ಸಜ್ಜನ ಚರಣಕಮಲದಲ್ಲಿ  ||೨||

 

ಭಾಗೀರಥಿ ಧರನೆ ಭಯವ ಪರಿಹರಿಸಯ್ಯ | ಲೇಸಾಗಿ ನೀ ಸಲಹೋ ಸ೦ತತ ಶರ್ವದೇವಾ|

ಭಾಗವತ ಜನ ಪ್ರೀಯ ವಿಜಯವಿಠ್ಠಲನ೦ಘ್ರಿ | ಜಾಗು ಮಾಡದೆ ಭಜಿಪ ಭಗ್ಯವನೆ ಕೊಡು ಶ೦ಭೋ||೩||

Posted in: