Shivaratri special -1

Shiv Darushana Namagayithu Kele! Shivratriya Jagarane vele!
[ We obtained the Darshan of Lord ShivaOn the night of Shivratri]
Rudra, Shiva, Mahadeva, Virupaksha, Veerabhadra, Shambu, Shankara.etc.etc.,. So many names of Lord Shiva!  He fulfils the wants of all his devotees promptly. He is the utmost Vaishnava, the first among the devotees of Mahavishnu. He is the representative of our thoughts and intellect. Our Sadhana can be possible only with his blessings. Jagannath Dasaru, the author of HariKathaMruthaSara, has prayed to Lord Shiva so that he doesn't get arrogant or proud of compiling the great work

"Vamadeva Virinchitanaya
Umamanohara Vugradhurjati
Samajajinavasanabhushan sumanosothansa|
Kamahara Kailasamandira
Somasuryanalavilochana
Kamithaprada karunisemage Sada sumangalava.||

Kruthivasane hinde nee
Nalvathu Kalpa sameeranalli
Shishyathva vahisi akhilahgamarthagalodi jaladiyolu|
Hattu kalpadi tapavagaidu
Adityaroluthama nenesi Puru-
Shothamana paryankapada vaidideyo Mahadeva ||

From the above verses,we understand the significance and importance of Lord Rudra.  Any person, who wants to have the Darshan of Lord Vishnu, must first please Lord Rudra. The process of worship may be varied but is essential. We should always remember the praise worthy Lord Rudra who can be easily pleased. Lord Rudra is easily pleased by the chanting of his names and his virtues than by bathing him with water." Can our water used to bath him equate the Ganga who forever resides on his head.?" We should let go of our self-conceited arrogance and keep our hearts and minds on Sri Hari, Bharatiramana Mukhyaprana and Rudradeva. The great Vijaya Dasaru says"our mind and thoughts form the basis of our papa and punya, without the instigation and prompting of Lord Rudra,this is not possible. Even a little effort to worship him on our part pleases him to a great level and he grants us endless grace and compassion and makes our Sadhana path easier! Come, on this holy day of Shivratri, let us pray to Lord Rudra and invoke his blessings.

.................................................................................................................................................................................................................................................................................

ಶಿವ ದರುಶನ ನಮಗಾಯಿತು ಕೇಳೆ|ಶಿವರಾತ್ರಿಯ ಜಾಗರಣೆ ವೇಳೆ
ರುದ್ರ, ಶಿವ, ಮಹಾದೇವ, ವಿರೂಪಕ್ಷ. ವೀರಭದ್ರ, ಶಂಭು, ಶಂಕರ ಹೀಗೆ ಹಲವಾರು ನಾಮಗಳಿಂದ ಸರ್ವರಿಂದಲೂ ವಿಶೇಷವಾಗಿ ಪೂಜೆಗೊಂಡು ಅವರ ಮನದ ಅಭಿಲಾಷೆಗಳನ್ನು ಅತಿ ಶೀಘ್ರದಲ್ಲಿ ಪೂರ್ಣಗೊಳಿಸುವ ರುದ್ರ ದೇವರು ಮಹಾ ವೈಷ್ಣವಾಗ್ರೇಸರರು. ಶ್ರೀ ಹರಿಯ ಅನನ್ಯ ಭಕ್ತರು. ಮನೋಭಿಮಾನಿ ದೇವತೆಯಾದ ಇವರ ಮೂಲಕವೇ ನಮ್ಮ ಸಾಧನೆ. ಹರಿಕಥಾಮೃತ ಸಾರದ ಕರ್ತೃಗಳಾದ ಶ್ರೀ ಜಗನ್ನಾಥ ದಾಸರು ನಾನು ಗ್ರಂಥಕರ್ತನು ಎಂಬ ಅಹಂಕಾರವನ್ನು ಕಳೆದುಕೊಳ್ಳುವುದಕ್ಕೋಸ್ಕರವೇ  ರುದ್ರದೇವರನ್ನು ಸ್ತೋತ್ರ ಮಾಡಿದ್ದಾರೆ.

ವಾಮದೇವ ವಿರಿಂಚಿತನಯ ಉ-
ಮಾಮನೋಹರ ಉಗ್ರಧೂರ್ಜಟಿ
ಸಾಮಜಾಜಿನವಸನಭೂಷಣ ಸುಮನಸೋತ್ತಂಸ||
ಕಾಮಹರ ಕೈಲಾಸಮಂದಿರ
ಸೋಮಸೂರ್ಯಾನಲವಿಲೋಚನ
ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ||

ಕೃತ್ತಿವಾಸನೆ ಹಿಂದೆ ನೀನಾ-
ಲ್ವತ್ತು ಕಲ್ಪ ಸಮೀರನಲಿ ಶಿ-
ಷ್ಯತ್ವ ವಹಿಸ್ಯಖಿಳಾಗಮಾರ್ಥಗಳೋದಿ ಜಲಧಿಯೊಳು||
ಹತ್ತು ಕಲ್ಪದಿ ತಪವಗೈದಾ-
ದಿತ್ಯರೊಳಗುತ್ತಮನೆನಿಸಿ ಪುರು-
ಷೋತ್ತಮನ ಪರಿಯಂಕಪದ ವೈದಿದೆಯೊ ಮಹದೇವ||

ಈ ಪದ್ಯಗಳನ್ನು ಅವಲೋಕಿಸಿದಾಗ ರುದ್ರ ದೇವರ ವಿಶೇಷತೆ ಅರಿವಾಗುತ್ತದೆ. ಭಗವಂತನನ್ನು ಕಾಣಬೇಕಾದಲ್ಲಿ ಪ್ರತಿಯೊಬ್ಬರೂ ರುದ್ರ ದೇವರನ್ನು ಆರಾಧಿಸಲೇಬೇಕು. ಆಚರಣೆಗಳಲ್ಲಿ ಭೇದವಿದ್ದರೂ ಆರಾಧನೆ ಅತ್ಯವಶ್ಯಕ. ಸ್ತೋತ್ರಪ್ರಿಯನಾದ ರುದ್ರನನ್ನು ಸದಾ ಸ್ಮರಿಸಬೇಕು. ಅಭಿಷೇಕ ಪ್ರಿಯನಾದ ಶಂಕರನಿಗೆ ನೀರಿನ ಅಭಿಷೇಕಕ್ಕಿಂತ ಅವನ ನಾಮ ಸ್ಮರಣೆಯ ಅಭಿಷೇಕ ಪ್ರಿಯ. ಇದಕ್ಕೆ ದಾಸರಾಯರ ಈ ನುಡಿಯೇ ಸಾಕ್ಷಿ. ಮಂದಾಕಿನೀ ಧರಗೆ ಗಂಗಾಂಬು ಮಜ್ಜನವೇ? ಎಂದಿದ್ದಾರೆ. ಗಂಗೆಯನ್ನು ಜಟೆಯಲ್ಲಿ ಧರಿಸಿದವಗೆ ನಾವು ಮಾಡುವ ಅಭಿಷೇಕ ಸಮವೇ? ಹಾಗಾಗಿ ಸದಾಕಾಲ ಹರಿಸ್ಮರಣೆಯಲ್ಲಿ ರತರಾಗಿ, ಅವನ ಭಕ್ತರನ್ನು ಅಹಂಕಾರದಿಂದ ದೂರ ಮಾಡಿ ಸನ್ಮಾರ್ಗದಲ್ಲಿ ನಡೆಸಿ, ಸಜ್ಜನರು ಮಾಡುವ ಅಲ್ಪ ಸೇವೆಯನ್ನೂ ಸಹ ಸ್ವೀಕರಿಸಿ ಅವರಿಗೆ ಅನಂತ ಫಲ ಬರುವಂತೆ ಮಾಡುವ ದಾಯಾಮಯನನ್ನು ಅನುಗಾಲ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಮನಸು ಕಾರಣವಲ್ಲ ಪಾಪಪುಣ್ಯಕ್ಕೆಲ್ಲ ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ.....ವಿಜಯರಾಯರ ಮಾತು. ನಾವು ಮಾಡುವ ಎಲ್ಲ ಕರ್ಮಗಳಿಗೂ ಪ್ರೇರಕರಾದ ರುದ್ರದೇವರನ್ನು ಮಹಾ ಶಿವರಾತ್ರಿಯ ಪರ್ವಕಾಲದಲ್ಲಿ ವಿಶೇಷವಾಗಿ ಆರಾಧಿಸೋಣ. ಅವರ ಅನುಗ್ರಹಕ್ಕೆ ಪಾತ್ರರಾಗೋಣ.


 

Posted in: