Programs of Sri Suyateendra Theertaru at Bangalore

ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಮಂತ್ರಾಲಯ ದ ಪೀಠಾಧಿಪತಿಗಳಾದ ಶ್ರೀ ಶ್ರೀ ೧೦೮ಶ್ರೀ ಸುಯತೀಂದ್ರ ತೀರ್ಥ ಶ್ರೀಪಾದಂಗಳವರು ೧೪ಫೆಬ್ರವರಿಯಿಂದ ೧೬ರವರೆಗೆ ಬೆಂಗಳೂರಿನಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಮಲ್ಲೇಶ್ವರಂ ಈಜುಕೊಳ ಬಡಾವಣೆಯ  ರಾಯರ ಮಠದಲ್ಲಿ ರಜತ ರಥ ಉದ್ಘಾಟನೆಗಾಗಿ ಆಗಮಿಸುತ್ತಿರುವ ಶ್ರೀ ಗಳನ್ನು ಭವ್ಯವಾದ ಮೆರವಣಿಗೆಯಲ್ಲಿ ಕರೆದೊಯ್ಯಲು ಸಿದ್ಧತೆಗಳು ನಡೆದಿದೆ. 

ಕಾರ್ಯಕ್ರಮಗಳ ವಿವರ ಹೀಗಿದೆ.

೧೫-೨-೧೨ ಮಲ್ಲೇಶ್ವರಂ ಸುಧೀಂದ್ರ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ವತಿಯಿಂದ ಮೆರವಣಿಗೆ

ಸಂಜೆ ೫ಕ್ಕೆ ಮಲ್ಲೇಶ್ವರಂ ಆಟದ ಮೈದಾನ (ಪೊಲೀಸ್ ಠಾಣೆ ಎದುರು)ದಿಂದ ಶ್ರೀ ರಾಘವೇಂದ್ರ ಸ್ವಾಮಿ ಮಠ ಸುಧೀಂದ್ರನಗರ, ೬ನೇಕ್ರಾಸ್, ಮಲ್ಲೇಶ್ವರಂ ತನಕ ಭವ್ಯವಾದ ಮೆರವಣಿಗೆ 

ಸಂಜೆ ೬ಕ್ಕೆ ಸಭಾ ಕಾರ್ಯಕ್ರಮ.
 
೧೬-೨-೨೦೧೧ ಬೆಳಗ್ಗೆ ೧೧ಘಂಟೆ. ಮಲ್ಲೇಶ್ವರಂ ಸುಧೀಂದ್ರ ನಗರ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ರಜತ ರಥ ಸಮರ್ಪಣೆ ಶ್ರೀ ಸುಯತೀಂದ್ರತೀರ್ಥ ಶ್ರೀಪಾದಂಗಳವರಿಂದ  
 
ಸಂಜೆ ೬ಕ್ಕೆ ಸನ್ಮಾನ ಕಾರ್ಯಕ್ರಮ: ಶ್ರೀ ಶ್ರೀ ಸುಯತೀಂದ್ರ ತೀರ್ಥ ಶ್ರೀ ಪಾದಂಗಳವರ ಘನ ಉಪಸ್ಥಿತಿಯಲ್ಲಿ. 
 
ಅಧ್ಯಕ್ಷತೆ: ಶ್ರೀ ಡಿ.ವಿ.ಸದಾನಂದ ಗೌಡರು ಕರ್ನಾಟಕ ಸರ್ಕಾರದ ಗೌರವಾನ್ವಿತ ಮುಖ್ಯಮಂತ್ರಿಗಳು. 
Posted in: