A Brief note on Vijaya Ekadashi - Bilingual

King Yudhistra urges the revered Lord Krishna, Oh Ocean of Kindness- Vasudeva! kindly let us know the name and significance of that Ekadasi that falls on the Krishna Paksha (before the new moon) of the holy month of Magha``. Lord Krishna says, ``King of Kings! This Ekadasi is known as `Vijaya~ Anyone who performs this Vrata(austerity) with a noble heart  will always achieve victory and wash away all their sins.

In years gone by,  once Sage Narada enquires about this Vijaya Ekadasi from the Lord Brahma. Brahma narrates the story of Vijaya Ekadasi to Narada. Vijaya Ekadasi is an ancient Vrat, and anyone following it with austerity  will always be victorious in their noble ventures.

Lord Rama, Laxmana and Sita  were staying in Panchvati during the period of Banishment to the forest from Ayodhya. The demon king,  Ravana kidnaps Sita by cheating when Rama and Laxmana were absent from the  Hermit. Having come to know about the kidnapping through dying Jatayu bird, Rama seeks the help of Sugreeva, the king of monkeys in tracing Sita. The great Hanuman crosses over to Lanka , discovers there Sita in the Ashoka Wood. He gives her the ring of Sri Rama, burns down the town of Lanka and comes back to the mainland and lets Rama and others know all the details of Lanka and its occupants. Immediately, Lord Rama and the army of monkeys, bears, squirrels, birds, etc reach the shore of the ocean. Seeing the vast ocean, Rama acts surprised and tells Laxman, Oh Laxmana! See the abode of the Lord Varuna. There appears to be no end to the water. It is filled with dangerous unknown water animals. I am not able to think of any solution to cross the ocean.Laxmana says, Oh Eternal Lord! Here is the residence of the revered sage Rishi Bakadalvya. Let us take his suggestion and devise a plan to cross this ocean``.

Rama and Laxman go to the Ashram and bow their heads with reverence to the great sage. The Rishi recognizes Rama as the Incarnation of the great Lord himself who has come to kill the evil demons on the Earth. He also prays with reverence to the Lord and says, Oh Ramachandra! Your arrival has sanctified my humble Ashram. Please let me know the purpose of your journey in this direction. Lord Rama says, Oh Great Sage!  I have come here with an army to destroy the evil demons of Lanka. Your blessing will help us in this task. Please let us know a way to cross this ocean and come victorious``  The Rishi says,`` oh Ramachandra! I will tell you a Vrata which always leads to victory. It will enable you to win over Lanka and obtain great fame. He Rama! the Ekadasi of the later part of the month of Magha is Vijaya Ekadasi. Perform this Ekadasi with resoluteness.  I will tell you the procedure of the Vrat_ On the tenth day of Krishna Paksha, i.e., Dasami, install a Kalash with Narayana in it. Perform the Shodashopachar Pooja with  sandal, flowers, diya  dhoop, and Naivedya of coconut, apt fruits and other delicacies. Fast completely on Ekadasi and stay awake in the night chanting the greatness of Lord Vishnu thro` songs, stories ,etc. Early morning on Dwadasi, the twelth day, take the Kalash to the banks of the Holy River, lake or well. Perform pooja there and present the Kalash  and Narayana to a Brahmin well versed in Vedas. You can perform the other great Dhanas also along with this.  Ramacandra, you and the King of the Monkeys perform this vrat with purity and sanctity. You will definitely be victorious..

Lord Rama performed this Vrata as advised by the Rishi Bakadalvya. As a result,he was victorious in defeating Ravana, getting back Sita and ruling Ayodhya.So Raja, everyone who follows this Vijaya Ekadasi will be victorious on the Earth, get their sins washed away and Moksha as well . Anyone who reads and listens to this will get the fruit (phala) of performing the Vajpaya Yagna).
------------------------------------------------------------------------------------------------------------------------------------

ಯುಧಿಷ್ಟಿರ ಕೃಷ್ಣ ನನ್ನು ಕುರಿತು ಕೇಳುತ್ತಾನೆ.  "ಹೇ ದಯಾಸಾಗರಾ ! ವಾಸುದೇವಾ !! ನಮ್ಮ ಮೇಲೆ ಪ್ರಸನ್ನನಾಗಿ ಮಾಘ ವದ್ಯ ಏಕಾದಶಿಯ ಹೆಸರೇನು ? ಮತ್ತು ಅದರ ಮಹಾತ್ಮೆಯನ್ನು ಹೇಳು ! ಶ್ರೀಕೃಷ್ಣನು ಅನ್ನುತ್ತಾನೆ - " ರಾಜೇಂದ್ರಾ! ಈ ಏಕಾದಶಿನ್ನು  "ವಿಜಯಾ " ಯಂದು ಕರೆಯುತ್ತಾರೆ. ಕಾರಣ ಅದರ ವ್ರತ ಮಾಡುವವರಿಗೆ ಯಾವಾಗಲೂ ವಿಜಯವೇ ಸಿಗುತ್ತದೆ. ಈ ಏಕಾದಶಿ ವ್ರತದ ಮಹಾತ್ಮೆ ಎಲ್ಲ ಪಾತಕಗಳ ನಾಶ ಮಾಡುವಂಥಾದ್ದು ಇರುತ್ತದೆ. ಪೂರ್ವ ಕಾಲದಲ್ಲಿ ನಾರದನು ಬ್ರಹ್ಮ ದೇವರನ್ನು ಕೇಳಿದನು. " ಹೇ ದೇವರಲ್ಲಿ ಶ್ರೇಷ್ಠನಾದ ಬ್ರಾಹ್ಮಣನೇ ಈ ವಿಜಯಾ ಹೆಸರಿನ ಏಕಾದಶಿ ವ್ರತ ಏನು ಇರುವದು? ಇದನ್ನು ಕೃಪೆಮಾಡಿ ಎನಗೆ ಹೇಳು!" ಎಂದು ನಾರದರು ಕೇಳಿದಾಗ ಆಗ ಪಿತಾಮಹನಾದ ಬ್ರಹ್ಮದೇವರು ಅನ್ನುತ್ತಾರೆ - "ಎಲ್ಲ ಪಾಪಗಳನ್ನು ಸಂಪೂರ್ಣ ನಾಶಮಾಡುವಂಥಾ ಈ ಏಕಾದಶಿಯ ಕಥೆಯನ್ನು ನಾನು ಹೇಳುತ್ತೇನೆ ಕೇಳು!"  ವಿಜಯಾ ಏಕಾದಶಿಯ ವ್ರತ ಬಹಳ ಪ್ರಾಚೀನ ಕಾಲದಿಂದ ಇರುವದು. ಮತ್ತು ಸಕಲ ಪಾಪವನ್ನು ನಾಶ ಮಾಡುವದು. ನಾನು ಈ ವ್ರತನನ್ನು ಇನ್ನೂವರೆಗೂ ಯಾರಿಗೂ ಹೇಳಿರುವದಿಲ್ಲ. ಈ ಏಕಾದಶಿ ವ್ರತ ಮಾಡುವದರಿಂದ ನಿಃಸಂಶಯವಾಗಿ ಜಯ ಸಿಗುತ್ತದೆ. ಹಿಂದಕ್ಕೆ ರಾಮಚಂದ್ರನು ಹದಿನಾಲ್ಕು ವರ್ಷ ವನವಾಸಕ್ಕೆ ಹೋದಕಾಲದಲ್ಲಿ ಸೀತಾ, ಲಕ್ಷ್ಮಣ ಸಹಿತವಾಗಿ ಪಂಚವಟಿಯಲ್ಲಿ ಇತುತ್ತಿದ್ದನು. ಅಲ್ಲಿ ಇರುವಾಗ ದೊಡ್ಡ ಮನಸ್ಸಿನ ರಾಘವನ ಅರ್ಧಂಗಿಯಾದ ತಪಸ್ವಿನಿ ಸೀತೆಯನ್ನು ರಾವಣನು ಅಪಹರಿಸಿಕೊಂಡು ಹೋದನು. ಆ ದುಃಖದಿಂದ ರಾಮಚಂದ್ರನು ಮೂರ್ಛಿತನಾದನು. ಆ ಸಮಯದಲ್ಲಿ ಸ್ವಲ್ಪ ಆಯುಷ್ಯವುಳ್ಳ ಜಟಾಯು ರಾಮನಿಗೆ ಎಲ್ಲ ವೃತ್ತಾಂತ ಹೇಳಿ ರಾಕ್ಷಸನನ್ನು ಕೊಂದನು. ಮತ್ತು ವಾನರನಾದ ಸುಗ್ರೀವನ ಮಿತ್ರತ್ವವನ್ನುಬೆಳೆಸಿದನು. ಅವನು ರಾಮನಿಗೆ ಸಹಾಯ ಮಾಡುವದಾಗಿ ವಾನರ ಸೈನ್ಯವನ್ನು ಕೊಟ್ಟನು. ಅನಂತರ ಹನುಮಂತನು ಲಂಕೆಗೆ ಹೋಗಿ ಅಶೋಕವನದಲ್ಲಿ ಜಾನಕಿಯನ್ನು ಕಂಡನು. ಅಲ್ಲಿ ಮಾರುತಿಯು ರಹಸ್ಯ ವಿಷಯವನ್ನು ತಿಳಿಸಿ ರಾಮನು ಕೊಟ್ಟ ಉಂಗುರವನ್ನು ಸೀತೆಗೆ ಕೊಟ್ಟನು. ಮುಂದೆ ಅವನು ಲಂಕಾ ದಹನದ ಅಜಯ ಕೆಲಸವನ್ನು ಮಾಡಿದನು. ಅನಂತರ ಮರಳಿ ಬಂದು ರಾಮನಿಗೆ ಎಲ್ಲ ಸಂಗತಿಯನ್ನು ಹೇಳಿದನು. ಆ ಸಮಾಚಾರ ಕೇಳಿ ಸುಗ್ರೀವನ ಅನುಮತಿಯನ್ನು ಪಡೆದು ರಾಮನು ಲಂಕೆಯ ಕಡೆಗೆ ಪ್ರಸ್ಥಾನ ಬೆಳೆಸಿದನು. ವಾನರಿಗೆ ಪ್ರಿಯನಾದ ರಾಮನು ಆ ವಾನರ ಸೈನ್ಯ ಸಮೇತನಾಗಿ ಸಮುದ್ರವನ್ನು ದಾಟುವ ಯೋಚನೆಯನ್ನು ಹಾಕತೊಡಗಿದನು. ಆ ಅಪಾರವಾದ ಸಮುದ್ರವನ್ನು ನೋಡಿ ರಾಮನಿಗೆ ಆಶ್ಚರ್ಯವಾಯಿತು! ಆಗ ಕಣ್ಣುಗಳನ್ನು ಅರಳಿಸಿ ರಾಮನು ಲಕ್ಷ್ಮಣನಿಗೆ ಅನ್ನುತ್ತಾನೆ- " ಲಕ್ಷ್ಮಣಾ! ವರುಣನ ನಿವಾಸ ಸ್ಥಾನವಾಗಿರುವ ಈ ಸಮುದ್ರವು ಯಾವ ಪುಣ್ಯದಿಂದ ತುಂಬಿರುವುದೋ ? ಈ ಸಮುದ್ರ ನೀರಿಗೆ ಅಂತವಿಲ್ಲ. ಭಯಂಕರ ಜಲಚರ ಪ್ರಾಣಿಗಳು ಇದರಲ್ಲಿ ಇವೆ. ಈ ಸಮುದ್ರ ದಾಟುವ ಯಾವ ಉಪಾಯವು ನನಗೆ ಕಂಡುಬರುತ್ತಿಲ್ಲ !" ಆಗ ಲಕ್ಷ್ಮಣನು- ’ಹೇ ಪುರಾಣ ಪುರುಷರಾಮಾ! ನೀನು ಆದಿದೇವ ಇರುವೆ. ಇಲ್ಲಿ ಸಮೀಪ ಬಕದಾಲ್ವ್ಯ ಋಷಿ ಇರುವರು. ಆ ಶೇಷ್ಠ ಪುರಾತನ ಋಷಿ ಬಳಿ ಹೋಗಿ ಈ ಸಮುದ್ರ ದಾಟುವ ಉಪಾಯ ವಿಚಾರಿಸುವಾ!" ಲಕ್ಷ್ಮಣನ ಈ ಕಲ್ಯಾಣಕಾರಕ ನುಡಿ ಕೇಳಿ ರಾಮಚಂದ್ರನು ಶ್ರೇಷ್ಠ ಋಷಿ ಬಕದಾಒಭ್ಯರ ಆಶ್ರಮಕ್ಕೆ ತೆರಳಿ, ಅವರಿಗೆ ಭಕ್ತಿ-ಭಾವದಿಂದ ನಮಸ್ಕಾರ ಮಾಡಿದನು.
ಋಷಿಗಳು  ರಾಮನಿಗೆ - " ರಾಮಚಂದ್ರ ! ನಿನ್ನ ಆಗಮನದಿಂದ ನನ್ನ ಆಶ್ರಮ ಪವಿತ್ರವಾಯಿತು. ನೀನು ಇತ್ತಕಡೆ ಯಾವ ಉದ್ದೇಶದಿಂದ ಬಂದಿರುವೆ ?" ರಾಮಚಂದ್ರನು " ಋಷಿಶ್ರೇಷ್ಠರೇ! ಸೈನ್ಯ ಸಹಿತ, ರಾಕ್ಷಸರ ಲಂಕಾನಗರವನ್ನು ಗೆಲ್ಲುವದಕ್ಕಾಗಿ ಇಲ್ಲಿಗೆ ಬಂದಿರುವೆನು". ನಿಮ್ಮ ಆಶೀರ್ವಾದದಿಂದ ಈ ಕಾರ್ಯದಲ್ಲಿ ಯಶಸ್ವಿ ಆಗುವೆ. ನೀವು ಪ್ರೇಮಪೂರ್ವಕ ನಮಗೆ ಈ ಸಮುದ್ರರಾಟುವ ಉಪಾಯ ಹೇಳಿರಿ! ಅದಕ್ಕಾಗಿ ನಿಮ್ಮ ದರ್ಶನಕ್ಕೆ ಬಂದಿರುವೆನು? ಬಕದಾಲ್ಭ್ಯ ಋಷಿಗಳು - " ಶ್ರೀ ರಾಮಚಂದ್ರಾ! ಎಲ್ಲ ವ್ರತಗಲಲ್ಲಿ ಉತ್ತಮವಾದ ವ್ರತ ನಿನಗೆ ಹೇಳುವೆ! ನೀನು ಈ ವ್ರತ ಮಾಡಿದರೆ ನಿನಗೆ ಸರ್ವತ್ರ ವಿಜಯವು ಪ್ರಾಪ್ತವಾಗಿ ರಾಕ್ಷಸರನ್ನು, ಲಂಕೆಯನ್ನು ಗೆಲ್ಲುವೆ! ಅದರಿಂದ ದೀರ್ಘಕಾಲ ದೊರೆಯುವ ಕೀರ್ತಿ ಲಭಿಸುತ್ತದೆ. ಹೇ ರಾಮನೇ! ಮನ ಏಕಾಗ್ರಮಾಡಿ ಈ ವ್ರತ ಮಾಡು. ಮಾಘ ಕೃಷ್ಣ ಪಕ್ಷದಲ್ಲಿ ವಿಜಯಾ ಹೆಸರಿನ ಏಕಾದಶಿ ಬರುತ್ತದೆ. ಆ ಏಕಾದಶಿ ವ್ರತ ನೀನು ಮಾಡಿದರೆ, ನಿನಗೆ ವಿಜಯ ಪ್ರಾಪ್ತವಾಗುವುದು. ಎಲ್ಲ ವಾನರ ಜೊತೆ ಈ ಸಾಗರ ದಾಟಿ ನಿಃಸಂಶಯವಾಗಿ ಹೋಗುವಿ! ಉತ್ತಮ ಫಲ ಕೊಡುವ ಈ ಏಕಾದಶಿ ವಿಧಿ ಹೇಳುವೆ ಕೇಳು! ದಶಯಿ ತಿಥಿಯಂದು ಒಂದು ಕಲಶ ಸ್ಥಾಪನೆ ಮಾಡಬೇಕು. ಆ ಕಲಶದಲ್ಲಿಯ ನಾರಾಯಣನನ್ನು ಷೋಡಶೋಪಚಾರಗಳಿಂದ ಪೂಜೆ ಮಾಡಬೇಕು. ಆ ಕಲಶವನ್ನು ಗಂಧ-ಪುಷ್ಪಾದಿಗಳಿಂದ ಅಲಂಕಾರ ಮಾಡಬೇಕು. ಧೂಪ-ದೀಪಾದಿಗಳಿಂದ ಪೂಜಿಸಿ ನೈವೇದ್ಯವನ್ನು ತೋರಿಸಬೇಕು. ಮತ್ತು ಟೆಂಗಿನಕಾಯಿಯನ್ನು ಒಡೆದು ನಾನಾ ಫಲಗಳನ್ನು ಅರ್ಪಣ ಮಾಡಬೇಕು. ಶ್ರೀರಾಮ ಆ ದಿವಸ ಪೂಜೆ ಮಾಡಿದ ಕಲಶ ಹತ್ತಿರ ಭಕ್ತಿ-ಭಾವದಿಂದ ನಾಮಸ್ಮರಣೆ ಮಾಡಬೇಕು. ವ್ರತ ಮಾಡುವವನು ಈ ಕಲಶದ ಎದುರು ರಾತ್ರಿ ಜಾಗರಣೆ ಮಾಡಬೇಕು. ರಾಜಾ ದ್ವಾದಶಿಯ ದಿವಸ ಸೂರ್ಯೋದಯ ಸಮಯ ಆ ಕಲಶವನ್ನು ನದಿ ಝರಿ ಇಲ್ಲವೆ ಸರೋವರ ಹತ್ತಿಅರ ಒಯ್ಯಬೇಕು. ಅಲ್ಲಿ ಅದನ್ನು ಸ್ಥಾಪನೆ ಮಾಡಿ ವಿಧಿ ಪೂರ್ವಕ ಪೂಜೆ ಮಾಡಬೇಕು. ಅನಂತರ ಆ ಕಲಶವನ್ನು ನಾರಾಯಣ ಮೂರ್ತಿ ಸಹ ವೇದ ಪಾರಂಗತ ಬ್ರಾಹ್ಮಣರಿಗೆ ದಾನ ಮಾಡಬೇಕು. ಆ ಕಲಶದ ಜೊತೆಗೆ ಮಹಾ ದಾನಗಳನ್ನು ಮಾಡಬೇಕು. ರಾಮಚಂದ್ರಾ! ನೀನು ವಾನರ ಸೈನ್ಯದ ಅಧಿಪತಿ ಸಹ ಈ ವ್ರತವನ್ನು ಮಾಡಬೇಕು. ಅಂದರೆ ನಿನಗೆ ವಿಜಯ ಪ್ರಾಪ್ತಿಯಾಗುತ್ತದೆ. ಬಕದಾಲ್ಭ್ಯ ಋಷಿಯ ಈ ಮಾತನ್ನು ಕೇಳಿ ಶ್ರೀರಾಮಚಂದ್ರನು ಅವರು ಹೇಳಿದ ವಿಧಿ ಪ್ರಕಾರದಿಂದ ವ್ರತ ಮಾಡಿದರು. ಆ ವ್ರತ ಮಾಡುವದರಿಂದ ಆ ರಘುನಂದನಿಗೆ ವಿಜಯ ಸಿಕ್ಕಿತು. ರಾಜಾ ಯಾವ ಮನುಷ್ಯರು ವಿಧಿ ಪೂರ್ವಕ ಈ ವ್ರತವನ್ನು ಮಾಡುತ್ತಾರೋ, ಅವರಿಗೂ ಈ ಪೃಥ್ವಿಯ ಮೇಲೆ ವಿಜಯ ಪ್ರಾಪ್ತವಾಗುತ್ತದೆ. ಮತ್ತು ಅಕ್ಷಯ ಲೋಕದ ಪ್ರಾಪ್ತಿಯಾಗುತ್ತದೆ. ಅಂತೆ ರಾಜಾ ಈ ಕಾರಣ ಎಲ್ಲರೂ ವಿಜಯಾ ಏಕಾದಶಿಯ ವ್ರತ ಮಾಡಬೇಕು. ಈ ವಿಜಯಾ ಏಕಾದಶಿಯ ಮಹಾತ್ಮೆ ಎಲ್ಲ ಪ್ರಕಾರದ ಪಾತಕಗಳನ್ನು ನಾಶ ಮಾಡುತ್ತದೆ. ಈ ಮಹಾತ್ಮೆಯನ್ನು ಓದುವದರಿಂದ ಕೇಳುವದರಿಂದ ವಾಜಪೇಯ ಯಜ್ಞದ ಫಲವು ಸಿಗುತ್ತದೆ.

Posted in: