A Brief Note on Jaya Ekadashi - Bilingual

 

Jaya Ekadashi

ಮಾಘಮಾಸದ ಶುಕ್ಲ ಪಕ್ಷದಲ್ಲಿ ಬರುವ ಜಯಾ ನಾಮಕ ಏಕಾದಶಿಯೇ ಮಹತ್ಯ್ಮೆಯಕುರಿತು  ಧರ್ಮರಾಜನು ಶ್ರೀ ಕೃಷ್ಣನನ್ನು  ಪ್ರಶ್ನೆ ಮಾಡಿದನು. ಆಗ ಶ್ರೀ ಕೃಷ್ಣನು  "ಜಯಾ ಏಕಾದಶಿ" ಯನ್ನು ಭಕ್ತಿಪೂರ್ವಕ ಆಚರಿಸುವದರಿಂದ ಪಿಶಾಚತ್ವವೇ ಮೊದಲಾದ ಕೆಟ್ಟ ಕಾರ್ಯಗಳಿಂದ  ಬಿಡುಗಡೆ ಮಾಡುತ್ತದೆ. ಪ್ರೇತತ್ವ ನಿವಾರಣೆ ಯಾಗುತ್ತದೆ. ಎಲ್ಲಾ ಪಾಪಗಳನ್ನು ಪರಿಹರಿಸಿ ಮೋಕ್ಷವನ್ನು ಕೊಡುವದರಲ್ಲಿ ಇದಕ್ಕಿಂತಲು ಉತ್ತಮವಾದ ವ್ರತ ಬೇರೆಯಿಲ್ಲ. ಆದ್ದರಿಂದ ಈ ಏಕಾದಶಿಯನ್ನು ಪ್ರಯತ್ನಪೂರ್ವಕ ಮಾಡಲೇಬೇಕು.

ಪೂರ್ವದಲ್ಲಿ ನಡೆದ ಒಂದು ಇತಿಹಾಸವನ್ನು ಹೇಳುತ್ತೇನೆ. ದೇವೇಂದ್ರನ  ಸಭೆಯಲ್ಲಿ ಸಿದ್ಧರು, ಗಂಧರ್ವರು, ಸಾಧ್ಯರು ಎಲ್ಲರೂ ಕೂಡಿ ಸಂಗೀತ ವಾದ್ಯಗಳಿಂದ ತಾಳಕ್ಕೆ ತಕ್ಕಂತೆ ನರ್ತನೆ ಮಾಡುತ್ತಿದ್ದರು. ಚಿತ್ರಸೇನನ ಮಗಳು ಪುಷ್ಪವತಿಯೂ ಸಹ ಅದರಲ್ಲಿ ಭಾಗವಹಿಸಿದ್ದಳು. ಮಾಲ್ಯವಂತನ ಮಗ ಪುಷ್ಪವಂತನು ಸಹಾ ಅದೇ ಸ್ಥಳಕ್ಕೆ ಬಂದಾಗ ಪುಷ್ಪವತಿಯ ಸೌಂದರ್ಯಕ್ಕೆ ಮೊರೆಹೋಗಿ ಇಬ್ಬರೂ ಕೂಡ ಮದನ ಬಾಣಗಳಿಂದ ಹತರಾಗಿ ಪರಸ್ಪರ ಆನಂದಸಾಗರದಲ್ಲಿ ಮುಳಿಗಿದ್ದಾಗ ಸಂಗೀತ ಮತ್ತು ತಾಳಕ್ಕೆ ಸರಿಯಾಗಿ ನರ್ತನೆ ಮಾಡದೆ ವಿಪರೀತವಾಗಿ ನರ್ತನೆ ಮಾಡುತ್ತಿದ್ದನ್ನು ಸೂಕ್ಷ್ಮಗ್ರಾಹಿಯಾದ ದೇವೇಂದ್ರನು ಗಮನಿಸಿ ಅವರಿಗೆ ಪಿಶಾಚಿ ಜನ್ಮ ಬರುವಂತೆ ಶಾಪಕೊಟ್ಟನು.

ಆಗ ಭಯಂಕರವಾದ ಆಕಾರವುಳ್ಳ ರೂಪವನ್ನು ಸ್ವೀಕರಿಸಿ ಬಹಳ ದುಃಖಿತರಾಗಿ ಕಾಡಿನಲ್ಲಿ ತಿರುಗುತ್ತಾ ಕಾಲ ಕಳೆಯುತ್ತಿದ್ದರು. ಇವರು ಅಶ್ವತ್ಥ ವೃಕ್ಷದ ಕೆಳಗೆ ಕುಳಿತು ತುಂಬಾ ದುಃಖಿತರಾಗಿ  ನಾವು ಎಂತಹ ಕೆಟ್ಟಕೆಲಸವನ್ನು ಮಾಡಿದ್ದೇವೆ ಅಂತ ದುಃಖಪಡುತ್ತ ಇಡೀದಿನ ಉಪವಾಸದಿಂದ ಜಾಗರ ಸಹಿತ ಮಾಡಿದವು. ಅನಾಯಾಸವಾಗಿ ಆದಿನ ದೈವಯೋಗದಿಂದ ಜಯಾ ಏಕಾದಶಿ ಆಗಿತ್ತು. ಆ ಕೂಡಲೇ ಅವರಿಗೆ ಪಿಶಾಚಿಜನ್ಮ ಹೋಗಿ ಮತ್ತೆ ಗಂಧರ್ವ ಜನ್ಮ ಬಂತು.  ಈ ವಿಷಯವನ್ನು ದೇವೇಂದ್ರನ ಸಭೆಯಲ್ಲಿ ಹೇಳಿ ಭಗವಂತನ ಮಹಿಮೆಯನ್ನು, ಏಕಾದಶಿಯ ಮಹಿಮೆಯನ್ನು ಕೊಂಡಾಡಿದರು.

ಆದಕಾರಣ ಹೇ ರಾಜೇಂದ್ರ! ಸರ್ವದಾನಗಳ ಫಲ, ಸರ್ವಯಜ್ಞಗಳ ಫಲ, ಸರ್ವ ತೀರ್ಥಸ್ನಾನದಫಲ, ಕೋಟಿ ಕಲ್ಪವೃಕ್ಷಗಳ ದಾನದ ಫಲ ಮತ್ತು ವಿಷ್ಣುಲೋಕದಲ್ಲಿ ವಾಸವನ್ನು ಹೊಂದುವದು ಈ ಜಯಾ ಏಕಾದಶಿಯನ್ನು ಮಾಡುವದರಿಂದ ಹೊಂದುತ್ತಾನೆ. 

Source: L.Krishnachar
-----------------------------------------------------------------------------------------------------------------------------------


Dharmaraja questions Krishna on the significance of ‘JAYA’ Ekadashi that falls on the Shukalapaksha (before full moon) of the holy month of ‘Magha’. Shree Krishna says that any individual who performs this ekadashi with sincerity will not be affected by ghosts or from becoming ghosts.

Once, Devendra, along with other gods, Siddharu, Gandharvas, Sadhyaru, etc. were watching the beautiful dance of Apsaras along with the errorless instrumental accompaniments. Pushpawati, the daughter of Chittrasena, was also performing. But the arrival of Pushpavanta, son of Mallyavanta, distracted her. They get attracted to each other and she makes a mistake. The sharp eye of Devendra notices the wrong step and he curses both of them to become ‘demon’.

The frightened couple attain the frightening body of demon. But being good by nature, they sit under the peepal tree and lament on their state of affairs wondering what wrong they might have done previously to get this curse! They fast and remain awake that night. By chance, that day happened to be ‘JAYA EKADASHI’. Immediately, they lose their cursed body and are born as Gandharvas again.

Devendra narrates the above incident in his court and praises the significance of ekadashi.Krishna says,” So Dharmaraja, the  fruit of all good deeds and residence in Vishnuloka  can be obtained by just doing this vratha.”

      

Posted in: