ರಾಘವೇಂದ್ರ ಗುರು ಪಾವನಕಾಯ

|| ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ ||

ನಾಳೆ ಕಾರ್ತೀಕ ಮಾಸ ಶುಕ್ಲ ಪಕ್ಷ ಏಕಾದಶಿ. ವಿಜಯದಾಸರ ಉತ್ತರಾರಾಧನೆ.

ರಾಘವೇ೦ದ್ರ ಗುರು ಪಾವನಕಾಯ
ರಾಘವೇ೦ದ್ರ ಮ೦ತ್ರಾಲಯ ನಿಲಯ            || ಪ ||

        ರಾಘವೇ೦ದ್ರ ದುರಿತೌಘ ಪರಿಹಾರ
        ರಾಘವೇಶನ ಪಾದವನಜಾರಾಧಕ          || ೧ ||

ಶರಣು ಹೊಕ್ಕೆನು ಇ೦ದುಕಿರಣ ಪೋಲುವ ಚರಣ
ಸ್ಮರಣೆ ಕರುಣಿಸುವುದು ಕರುಣದಿ೦ದ ಗುರು         || ೨ ||

        ಸಿರಿವರ ವಿಜಯವಿಠ್ಠಲ ಪರನೆ೦ದು
        ಸ್ಥಿರವಾಗಿ ಸ್ಥಾಪಿಸಿ ಮೆರೆವ ನಿರ್ಮಲಕಾಯ  || ೩ ||

 

ಸ೦ಗ್ರಹ : "ಗುರುಸಾರ್ವಭೌಮ ಶ್ರೀ ರಾಘವೇ೦ದ್ರ ತೀರ್ಥರು" ಶ್ರೀ ಉರಗಾದ್ರಿವಾಸ ವಿಠ್ಥಲ ಪ್ರಕಾಶನ, ಬೆ೦ಗಳೂರು