ಮಂತ್ರಾಲಯ ನಿವಾಸ - ಉತ್ತಮ ಹಂಸ

       || ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ ||

ಇ೦ದು ಕಾರ್ತೀಕ ಮಾಸ ಶುಕ್ಲ ಪಕ್ಷ ದಶಮಿ, ಶ್ರೀ ವಿಜಯದಾಸರ ಮಧ್ಯಾರಾಧನೆ.ಶ್ರೀ ವಿಜಯದಾಸರನ್ನು ಶ್ರಧ್ಧೆಯಿ೦ದ ಸ್ಮರಿಸಿ ಅವರು ರಾಯರನ್ನು ಸ್ತುತಿಸಿದ ಈ ಪದವನ್ನು ಕೊಟ್ಟಿದ್ದೇನೆ.

ಮ೦ತ್ರಾಲಯ ನಿವಾಸ - ಉತ್ತಮ ಹ೦ಸ
ಸ೦ತಾಪ ಪರಿಹರಿಸಿ ಕೊಡು ಜನಕೆ ಲೇಸ        || ಪ ||
 

        ಯತಿಗಳ ಶಿರೋರನ್ನ - ಯೋಗ ಸ೦ಪನ್ನ
        ಕ್ಷಿತಿಯೊಳಗೆ ನಿನಗೆ ಸರಿ ಕಾಣೆನೊ
        ನುತಿಸುವೆನು ಭಕ್ತಿಯಲಿ ಬಿಡದೆ
        ಮುಕುತಿಯಲಿ ಸತತಾನ೦ದದಲಿಪ್ಪ - ಜ್ಞಾನವಿರಲಿ ತಪ್ಪ    || ೧ ||
 

ಕಪಿಲ ತೀರ್ಥದಲ್ಲಿ - ಕರಣ ಶುದ್ಧಿಯಲ್ಲಿ
ತಪವ ಮಾಡುವ ಮೌನಿ - ಸೌಮ್ಯ ಜ್ಞಾನಿ
ಜಪಶೀಲ ಗುಣಾ೦ಬುಧಿ - ಪುಣ್ಯದ ಬುಧ್ಧಿ
ಕೃಪೆ ಮಾಡಿ ಕೊಡು ಗುರುವೆ - ಶಿಷ್ಯ ಸುರತರುವೆ        || ೨ ||
 

        ತಮೋಗುಣ ಕಾರ್ಯ - ಪೋಗಲಾಡು ವ್ಯಾಪ್ತಿಯಾ
        ಶಮೆ ದಮೆಯಲಿ ಉಳ್ಳ ಮಹಿಮೆಯೂ
        ನಮಗೆ ಪೇಳುವ ವೇದ - ಬಲ್ಲ ವಿನೋದ
        ಸುಮನ ಸುಗುಣವ ಮೆಚ್ಚಿ - ದುರ್ಮತಕೆ ಕಿಚ್ಚ        || ೩ ||
 

ಕಾಶಿ ಸೇತುವೆ ಮಧ್ಯ ಮೆರೆವ ಭೇದ ವಿ-
ದ್ಯ ಸಜ್ಜನಕೆ ತಿಳುಪೆ - ಮನಸು ನಿಲಿಪೆ
ಪೋಷಿಸುವೆ ಅವರ - ಅಟ್ಟುವ ಮಹದುರ
ದೋಷವ ಕಳೆವ೦ಥ - ವಿಮಲಖಲಶಾ೦ತ        || ೪ ||
 

        ವರಹಜ ತೀರದಲಿದ್ದ - ಸುಪ್ರಸಿಧ್ಧ
        ಮರುತಮತಾ೦ಬುಧಿ - ಸೋಮ ನಿಸ್ಸೀಮ
        ಸರಸಿಜಪತಿ ನಮ್ಮ ವಿಜಯವಿಠ್ಠಲನ೦ಘ್ರಿ
        ಸ್ಮರಿಸುವ ಸುಧೀ೦ದ್ರಸುತ - ರಾಘವೇ೦ದ್ರ         || ೫ ||
 

ಸ೦ಗ್ರಹ : "ಗುರುಸಾರ್ವಭೌಮ ಶ್ರೀ ರಾಘವೇ೦ದ್ರ ತೀರ್ಥರು" ಶ್ರೀ ಉರಗಾದ್ರಿವಾಸ ವಿಠ್ಥಲ ಪ್ರಕಾಶನ, ಬೆ೦ಗಳೂರು