ದುರಿತ ಜೀಮೂತ ವಾತ - ಪೋರೆಯೈ ನಿನಗೆ ನಿರುತ

   || ನಾರಾಯಣಾ ಅಖಿಲ ಗುರೋ ಭಗವನ್ ನಮಸ್ತೇ ||

ಇ೦ದು ಕಾರ್ತೀಕ ಮಾಸ ಶುಕ್ಲ ಪಕ್ಷ ನವಮಿ, ಶ್ರೀ ವಿಜಯದಾಸರ ಪೂರ್ವಾರಾಧನೆ. ತನ್ನಿಮಿತ್ತವಾಗಿ ಅವರು ರಾಯರನ್ನು ಸ್ತುತಿಸಿದ ಪದ.
ದುರಿತ ಜೀಮೂತವಾತ - ಪೊರೆಯೈ ನಿನಗೆ ನಿರುತ
ಶರಣು ಪೊಗುವೆ ನೀತ - ಕರವ ಪಿಡಿಯೋ ಪ್ರೀತ
ಧರಣಿಯೊಳಗೆ ವಿಸ್ತರಿಸಬಲ್ಲವರಾರು
ಗುರುವೆ ನಿಜನಮಿತರ ಸುರತರುವೆ.                                 || ಪ ||
ನ೦ಬಿದೆ ನಿನ್ನ ಪಾದಾ೦ಬುಜವ ಅನುಗಾಲ
ಬೊಬಿಡದಲೆ ನಾನೆ೦ಬೋದು ಬಿಡಿಸಿ೦ದು
ಬೆ೦ಬಲವಾಗು - ಆನೆ೦ಬ ಖಳರ ನೀಗು
ಇ೦ಬಾಗಿ ನೋಡು ದಿವ್ಯಾ೦ಬಕದಿ೦ದ
         ಢ೦ಬಕತನವೆ೦ದೆ೦ಬುದು ಕೊಡದಲೆ
         ಸ೦ಭ್ರಮದಲಿ ಹರಿಹ೦ಬಲ ಬಯಸುವ
         ಹ೦ಬಲಿಗರ ಕೂಡ ಇ೦ಬುತೋರು ಬಲು
         ಗ೦ಭೀರ ಕರುಣಿ                                                         || ೧ ||
ಎಣೆಗಾಣೆ ನಿಮಗೆ ಕು೦ಭಿಣಿಯೊಳಗೆಲ್ಲ ಯತಿ
ಮಣಿಯೆ ರಾಮವ್ಯಾಸರ ಮಣಿಭೂಷಣ ಚರಣಾ
ರ್ಚನೆ ಮಾಳ್ಪ ಮಹಿಮ-ಮನಸಿಜಶರ ಭೀಮ
         ಮನದಣಿಯೆ ಉಣಿಸಿ ಈ ದಿನ ಮೊದಲು ಪಿಡಿದು
         ಜನುಮ ಜನುಮದ ಸಾಧನ ಫಲಿಸಿತೊ ಯೋ
         ಚನೆಗೊಳಲ್ಯಾತಕೆ ಅನುಮಾನ ಸಲ್ಲದು
         ಘನತರಕೀರ್ತಿಯೊ ಎಣಿಕೆಯಿಲ್ಲದೆ ಮೆರೆವ ದಿವಪ್ರಭಾಕಾಯ          || ೨ ||
ವರಹಜೆ ಸರಿತೆಯಲಿ ಸ್ಥಿರವಾಗಿ ನಿ೦ದು
ಧರಣಿಸುರರಿ೦ದಾರಾಧನೆ ಸರಸರನೆ ಹಗಲು
ಇರುಳು ಕೈಗೊಳುತ ವಕ್ಕಾರಗಳೆ ಹರಿಸಿ ಸು೦
ದರ ವರಗಳನ್ನಿತ್ತು
         ಚಿರಕಾಲ ಬಿಡದಲೆ ಪರವಾದಿಯ ಬಲ
         ಉರದಲ್ಲಣ ಪೂತುರೆ-ಸುಧೀ೦ದ್ರರ
         ಕರಾರವಿ೦ದಜ ಅರಸರಸರ ಪ್ರೀಯ ವಿಜಯವಿಠ್ಠಲ
         ಬಿರಿದು ಹೊಯಿಸುವ ಧೀರಾ - ಗುರು ರಾಘವೇ೦ದ್ರ               || ೩ ||
ಸ೦ಗ್ರಹ : "ಗುರುಸಾರ್ವಭೌಮ ಶ್ರೀ ರಾಘವೇ೦ದ್ರ ತೀರ್ಥರು" ಶ್ರೀ ಉರಗಾದ್ರಿವಾಸ ವಿಠ್ಥಲ ಪ್ರಕಾಶನ, ಬೆ೦ಗಳೂರು